ಮಡಿಕೇರಿ, ನ. 27: ವಿಶ್ವ ವಿಕಲಚೇತನರ ದಿನ ಆಚರಿಸುವ ಸಲುವಾಗಿ ವೀರಾಜಪೇಟೆ ತಾಲೂಕು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆ, ಗೋಣಿಕೊಪ್ಪ ಸತ್ಯಸಾಯಿ ಚಾರಿಟೇಬಲ್ ಟ್ರಸ್ಟ್, ರೋಟರಿ, ವೀರಾಜಪೇಟೆ ಸ್ತ್ರೀಶಕ್ತಿ ಒಕ್ಕೂಟ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ, ಪಾಲಿಬೆಟ್ಟ ಚೆಷೈರ್ ಹೋಂ ಅಮೃತವಾಣಿ ದೇವರಪುರ ಹಾಗೂ ತಾಲೂಕಿನ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕಿನ ವಿಕಲಚೇತನರಿಗೆ ತಾ. 28 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪದ ಸ.ಮಾ.ಪ್ರಾ.ಶಾಲೆ ಆಟದ ಮೈದಾನದಲ್ಲಿ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ.