ಸುಂಟಿಕೊಪ್ಪ, ನ. 27: ಕೂರ್ಗ್ ಹಳ್ಳಿ ತೋಟದ ಅಂದಗೋವೆ ವೃತ್ತದ ಬಳಿ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಶಾಂತಗಿರಿ ತೋಟದ ಸಮೀಪ ನಾಕೂರು ಶಿರಂಗಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂದಗೋವೆ ವೃತ್ತದ ಬಳಿಯಲ್ಲಿ ಮಂಗಳವಾರ ಬೆಳಿಗ್ಗೆ ಕಾನ್‍ಬೈಲ್ ಕಡೆಯಿಂದ ಸುಂಟಿಕೊಪ್ಪ ಆಗಮಿಸುತ್ತಿದ್ದ ಆಟೋರಿಕ್ಷಾ (ಕೆಎ12 ಬಿ.3543) ಹಿಂಬದಿಗೆ ಸುಂಟಿಕೊಪ್ಪದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಬೈಕ್ (ಕೆಎ03-ಎಚ್‍ಪಿ 2395) ಡಿಕ್ಕಿಯಾಗಿದ್ದು, ಬೈಕ್ ಸವಾರ ಹಕೀಂ ತಲೆ ಹಾಗೂ ಕೈ ಕಾಲುಗಳಿಗೆ ಗಾಯ ಗೊಂಡಿದ್ದು, ಅವರನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಸುಂಟಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.