ಸೋಮವಾರಪೇಟೆ, ನ. 27: ಇಲ್ಲಿನ ಜೇಸೀ ಸಂಸ್ಥೆಯ 2018ರ ಸಪ್ತಾಹದ ಅಂಗವಾಗಿ ಸ್ಥಳೀಯ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಯು.ಕೆ.ಜಿ.ವರೆಗಿನ ಛದ್ಮವೇಷ ಸ್ಪರ್ಧೆಯಲ್ಲಿ ಪುರಸ್ರ್ಮುತಿ ಜೆ. ಶೆಟ್ಟಿ (ಪ್ರ), ಕಶ್ವ ವಿರೇಶ್ (ದ್ವಿ) ಹಾಗೂ ಕಾಶಿಶೆಟ್ಟಿ (ತೃ) ಸ್ಥಾನಗಳಿಸಿದರು. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗಿನ ವಿಭಾಗದಲ್ಲಿ ಡಿ.ಎಂ. ಹೊಯ್ಸಳ (ಪ್ರ), ಚೇತನ್ (ದ್ವಿ) ಹಾಗೂ ನಿಖೇಶ್ ಗೌಡ (ತೃ) ಸ್ಥಾನಗಳಿಸಿದರು.

ಸೋಲೋ ನೃತ್ಯ ಸ್ಪರ್ಧೆಯ ಒಂದರಿಂದ ನಾಲ್ಕನೇ ತರಗತಿವರೆಗಿನ ವಿಭಾಗದಲ್ಲಿ ಆರುಷಿಗೌಡ (ಪ್ರ), ಚಾರ್ವಿ (ದ್ವಿ) ಹಾಗೂ ಅಸ್ಮಿತಾ (ತೃ) ಸ್ಥಾನಗಳಿಸಿದರು. 5 ರಿಂದ 7ನೇ ತರಗತಿವರೆಗಿನ ವಿಭಾಗದಲ್ಲಿ ಚಂದನ ಮತ್ತು ಸಿಂಚನಾ (ಪ್ರ), ವಿದ್ಯಾಲಕ್ಷ್ಮೀ (ದ್ವಿ) ಹಾಗೂ ಹೇಮಂತ್ (ತೃ) ಸ್ಥಾನಗಳಿಸಿದರು. 8 ರಿಂದ 10ನೇ ತರಗತಿ ವಿಭಾಗದಲ್ಲಿ ಎಸ್.ಎ. ರಿಶಾ (ಪ್ರ), ದಶಮಿ (ಪ್ರ), ಶ್ರೀಲಕ್ಷ್ಮೀ (ದ್ವಿ) ಹಾಗೂ ಸ್ನೇಹ (ತೃ) ಸ್ಥಾನಗಳಿಸಿದರು.

ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯ 4 ರಿಂದ 7ನೇ ತರಗತಿ ವಿಭಾಗದಲ್ಲಿ ಎನ್.ಜೆ. ಮನಶ್ರೀ (ಪ್ರ), ಎ.ಎಂ. ಅರ್ಪಿತ (ದ್ವಿ) ಹಾಗೂ ಬಿಂ.ಎಂ. ವಸಂತ್ (ತೃ) ಸ್ಥಾನಗಳಿಸಿದರು. ಎಂಟರಿಂದ ಹತ್ತನೇ ತರಗತಿ ವಿಭಾಗದಲ್ಲಿ ಜಿ.ಟಿ. ಸಾಹಿತ್ಯ (ಪ್ರ), ಪಿ. ಚರಣ್ (ದ್ವಿ) ಹಾಗೂ ಪೂರ್ವಿಕ ಪಿ. ಶೆಟ್ಟಿ (ತೃ) ಸ್ಥಾನಗಳಿಸಿದರು.

ಬರವಣಿಗೆ ಸ್ಪರ್ಧೆಯ 4 ರಿಂದ 7ನೇ ತರಗತಿ ವಿಭಾಗದ ಸ್ಪರ್ಧೆಯಲ್ಲಿ ಲಯಾ (ಪ್ರ), ಪ್ರತೀಕ್ಷ (ದ್ವಿ) ಹಾಗೂ ಜಿ.ಎಂ. ಪ್ರಿಯಾಂಕ (ತೃ) ಸ್ಥಾನಗಳಿಸಿದರು. ಎಂಟರಿಂದ ಹತ್ತನೇ ತರಗತಿ ವಿಭಾಗದಲ್ಲಿ ಪ್ರಾರ್ಥನ (ಪ್ರ), ಜಿಲ್ಫ (ದ್ವಿ) ಹಾಗೂ ಕೆ.ಎಂ. ಪ್ರಿಯಾಂಕ (ತೃ) ಸ್ಥಾನಗಳಿಸಿದರು.

ಗ್ರೂಪ್ ಡ್ಯಾನ್ಸ್ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವೈಷ್ಣವಿ ತಂಡ (ಪ್ರ), ಡೋಲು ಬಾಜೆ ರಂಗೀಲ ತಂಡ (ದ್ವಿ) ಹಾಗೂ ಕಲಾವೈಭವ ತಂಡ (ತೃ) ಸ್ಥಾನಗಳಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ಅನ್ನದಾತ ತಂಡ ಪ್ರಥಮ, ಸೋಲ್ಜರ್ಸ್ ತಂಡ (ದ್ವಿ) ಹಾಗೂ ಕಿಂಗ್ಸ್ ಆಫ್ ಕೂರ್ಗ್ ತಂಡ (ತೃ) ಸ್ಥಾನಗಳಿಸಿದರು.

ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸೀ ಅಧ್ಯಕ್ಷ ಕೆ.ಎ. ಪ್ರಕಾಶ್ ವಹಿಸಿದ್ದರು. ವಲಯ ಉಪಾಧ್ಯಕ್ಷ ದರ್ಶನ್, ಪ್ರಮುಖರಾದ ಶಿಲ್ಪಾ ಮಂಜುನಾಥ್, ಕಾರ್ಯದರ್ಶಿ ಎಂ.ಎ. ರುಬೀನಾ, ಮಾಯಾ ಗಿರೀಶ್, ಬಿ.ಎಸ್. ಮನೋಹರ್, ಪುರುಷೋತ್ತಮ್ ಉಪಸ್ಥಿತರಿದ್ದರು.