ಮಡಿಕೇರಿ, ನ. 27: ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಘಟಕಗಳು ಹಾಗೂ ನೀರು ಸಂಗ್ರಹಣಾ ಟ್ಯಾಂಕ್‍ಗಳ ಶುದ್ಧೀಕರಣ ಮಾಡುವ ಬಗ್ಗೆ ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ ಅವರ ಅಧ್ಯಕ್ಷತೆಯಲ್ಲಿಂದು ನಗರಸಭಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ನೀರಿನ ಶುದ್ಧೀಕರಣ ಘಟಕ ಹಾಗೂ ನೀರಿನ ಟ್ಯಾಂಕ್‍ಗಳ ಶುದ್ಧೀಕರಣ ಈ ಹಿಂದೆ ಪಿ.ಡಿ. ಪೊನ್ನಪ್ಪ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಆಗಿದ್ದು, ತದನಂತರದಲ್ಲಿ ಶುದ್ಧೀಕರಣ ಆಗಿರುವದಿಲ್ಲ. ಈ ಹಿನ್ನೆಲೆಯಲ್ಲಿ ಶುದ್ಧೀಕರಣಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.ಅಲ್ಲದೆ ಮೂರನೇ ಹಂತದ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಹಾಗೂ ಮಾರುಕಟ್ಟೆ ಕಾಮಗಾರಿಗೆ ಟೆಂಡರ್ ಅನುಮೋದನೆ ಆಗಿದ್ದು, ವಾರದೊಳಗಡೆ ಕೆಲಸ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗಿದೆ.ಇಂದು ರಸ್ತೆಗೆ ಚಾಲನೆನಗರದ ಜ. ತಿಮ್ಮಯ್ಯ ವೃತ್ತದ ಬಳಿಯಿಂದ ಓಂಕಾರೇಶ್ವರ ರಸ್ತೆಯನ್ನು ಸಂಪರ್ಕಿಸುವ ಏಕಮುಖ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ತಾ. 28 ರಂದು (ಇಂದು) ಚಾಲನೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ದೇವಾಲಯ ರಸ್ತೆಯಿಂದ ಜ. ತಿಮ್ಮಯ್ಯ ವೃತ್ತದೆಡೆಗೆ ಸಾಗುವ (ಮೊದಲ ಪುಟದಿಂದ) ವಾಹನಗಳಿಗೆ ನೇರವಾಗಿ ಸಂಪರ್ಕಿಸಲು ಅನುಕೂಲವಾಗಲಿದ್ದು, ಇದರಿಂದಾಗಿ ಮುತ್ತಣ್ಣ ವೃತ್ತದ ವಾಹನ ದಟ್ಟಣೆ ಕಡಿಮೆಯಾಗಲಿರುವದಾಗಿ ಸಭೆಯಲ್ಲಿ ಒಮ್ಮತದ ಸಲಹೆಗಳು ಕೇಳಿಬಂದವು.

ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಸವಿತಾ ರಾಕೆÉೀಶ್, ಶ್ರೀಮತಿ ಬಂಗೇರ, ಕೆ.ಜೆ. ಪೀಟರ್, ತಜಸ್ಸುಂ, ಜುಲೇಕಾಬಿ, ಪೌರಾಯುಕ್ತ ರಮೇಶ್ ಅವರುಗಳಿದ್ದರು.