ಗೋಣಿಕೊಪ್ಪ ವರದಿ, ನ. 27: ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಅಲ್ಲಿನ ಮಹಾತ್ಮಾ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಅಂತರ್ ಜಿಲ್ಲಾಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ನಾಲ್ವರು ಕ್ರೀಡಾಪಟುಗಳಿಗೆ ಪ್ರಶಸ್ತಿ ಲಭಿಸಿದೆ.

50 ವರ್ಷ ಮೆಲ್ಪಟ್ಟವರ ವಿಭಾಗದ 1500 ಮೀಟರ್ ಓಟದಲ್ಲಿ ಬಿ ಎ. ಪ್ರಕಾಶ್ ಪ್ರಥಮ ಸ್ಥಾನ, ಶಾಟ್‍ಪುಟ್‍ನಲ್ಲಿ 3ನೇ ಸ್ಥಾನ, ಪಡೆದುಕೊಂಡರು. 45 ವಯೋಮಿತಿಯ 5 ಕಿ.ಮೀ. ನಡಿಗೆ ಹಾಗೂ 800 ಮೀಟರ್ ಓಟದಲ್ಲಿ ಚೆಕ್ಕೇರ ಚಂದ್ರಪ್ರಕಾಶ್‍ಗೆ 2ನೇ ಸ್ಥಾನ, 45 ವಯೋಮಿತಿಯ 5 ಕಿ.ಮೀ. ನಡಿಗೆ ಹಾಗೂ ಶಾಟ್‍ಪುಟ್‍ನಲ್ಲಿ ವಿಭಾಗಗಳಲ್ಲಿ ಇಟ್ಟೀರ ಪೊನ್ನಣ್ಣ 3ನೇ ಸ್ಥಾನ, 45 ವಯೋಮಿತಿಯ ಲಾಂಗ್‍ಜಂಪ್‍ನಲ್ಲಿ ಕೆ.ಜಿ. ತಮ್ಮಯ್ಯಗೆ 3ನೇ ಸ್ಥಾನ ಲಭಿಸಿದೆ.