ಮಡಿಕೇರಿ, ನ. 27: ಪುರಾತನ ಹಾಗೂ ಸರಳ ವಿಧಾನದ ಗಣಿತ ‘ವೇದಿಕ್ ಮ್ಯಾಥ್ಸ್’ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾ ಗಾರ ಇಲ್ಲಿನ ಜ. ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ನೆರವೇರಿತು.

ಮೈಸೂರಿನ ವಸಿಷ್ಟ ಲರ್ನಿಂಗ್ ಸೆಂಟರ್ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಕಾರ್ಯಾಗಾರರಲ್ಲಿ ನಗರ ವ್ಯಾಪ್ತಿಯ ಜ. ತಿಮ್ಮಯ್ಯ, ಕೊಡಗು ವಿದ್ಯಾಲಯ, ಕೇಂದ್ರೀಯ ವಿದ್ಯಾ ಲಯ, ಬ್ಲಾಸಂ, ಸಂತ ಜೋಸೆಫರ ಹಾಗೂ ಸಂತ ಮೈಕಲರ ಪ್ರೌಢಶಾಲೆ ಗಳ 130 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಸಿಷ್ಟ ಸಂಸ್ಥೆಯ ಸಂಸ್ಥಾಪಕರಾದ ವಿನೂತನ್ ಕಾರ್ಯಾಗಾರ ನಡೆಸಿ ಕೊಟ್ಟರು. ಮಾಹಿತಿ ಪಡೆದ ವಿದ್ಯಾರ್ಥಿಗಳು ಸರಳ ವಿಧಾನದ ‘ವೇದಿಕ್ ಮ್ಯಾಥ್ಸ್’ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಾಗಾರವನ್ನು ಜ. ತಿಮ್ಮಯ್ಯ ಪ್ರಾಂಶುಪಾಲೆ ಸರಸ್ವತಿ ಉದ್ಘಾಟಿಸಿ ದರು. ವಸಿಷ್ಟ ಸಂಸ್ಥೆಯ ಕೊಡಗು ವಲಯ ಸಂಚಾಲಕಿ ಯಾಲದಾಳು ಕುಮುದ ಜಯಶಾಂತ್ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಾರ್ಯಾ ಗಾರ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಆಸಕ್ತಿ ಇರುವ ಶಾಲೆ ಹಾಗೂ ವಿದ್ಯಾರ್ಥಿಗಳು (7204322844) ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಮೈಸೂರಿನ ಶಿಲ್ಪ ಭಾಸ್ಕರ್ ಇದ್ದರು.