ಸೋಮವಾರಪೇಟೆ, ನ. 28: ಚೈಲ್ಡ್‍ಲೈನ್ ಸಂಸ್ಥೆಯ ಮಕ್ಕಳ ಸಹಾಯವಾಣಿ ವತಿಯಿಂದ ಇಲ್ಲಿನ ಜ್ಞಾನವಿಕಾಸ ಶಾಲೆಯಲ್ಲಿ, ‘ಚೈಲ್ಡ್‍ಲೈನ್ ಸೇ ದೋಸ್ತಿ’ ಕಾರ್ಯಕ್ರಮದಡಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ‘ಮಕ್ಕಳ ಹಕ್ಕುಗಳ’ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ಮಹೇಶ್, ವಸಂತ್, ನಾಗೇಶ್, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ, ವೈದ್ಯಾಧಿಕಾರಿ ಪಲ್ಲವಿ, ಆರೋಗ್ಯ ಕಾರ್ಯಕರ್ತೆ ತುಳಸಿ, ಪೊಲೀಸ್ ಸಿಬ್ಬಂದಿ ರಮೇಶ್, ಆರೋಗ್ಯ ಕಾರ್ಯಕರ್ತೆ ದಿವ್ಯ, ಸಮಾಜ ಕಲ್ಯಾಣಾಧಿಕಾರಿ ಶೇಖರ್, ಆಶಾ ಕಾರ್ಯಕರ್ತೆ ಗಾಯಿತ್ರಿ, ಮಕ್ಕಳ ಸಹಾಯವಾಣಿಯ ಸಂಯೋಜಕ ನವೀನ್‍ಕುಮಾರ್, ಸಿಬ್ಬಂದಿಗಳಾದ ಪ್ರವೀಣ್, ಬಿ.ಕೆ. ಕುಮಾರಿ, ಯೋಗೇಶ್ ಅವರುಗಳು ಉಪಸ್ಥಿತರಿದ್ದರು.