ಮಡಿಕೇರಿ, ನ. 28: ನಕ್ಸಲ್‍ವಾದಿ ರೂಪೇಶ್ ವಿಚಾರಣೆಯನ್ನು ಮಡಿಕೇರಿ ನ್ಯಾಯಾಲಯ ಡಿ. 19ಕ್ಕೆ ಮುಂದೂಡಿದೆ. ಈಗಾಗಲೇ ಬಂಧಿತನಾಗಿರುವ ರೂಪೇಶ್ ಪ್ರಕರಣದ ವಿಚಾರಣೆ ನ. 27 ರಂದು ನಡೆಯಬೇಕಿದ್ದು, ಆತನ ಗೈರು ಹಾಜರಿಯ ಕಾರಣದಿಂದಾಗಿ ವಿಚಾರಣೆಯನ್ನು ಮುಂದೂಡಲಾಗಿದೆ. ಕೇರಳದ ತ್ರಿಶೂರ್ ಜೈಲಿನಿಂದ ರೂಪೇಶ್‍ನನ್ನು ನಕ್ಸಲ್ ನಿಗ್ರಹ ದಳದ ಪೊಲೀಸರು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲ್ಪಟ್ಟಿದೆ ಎನ್ನಲಾಗಿದೆ. ಈ ಹಿಂದೆ ಅ. 29 ರಂದು ಆತನನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.