ವೀರಾಜಪೇಟೆ, ನ. 28: ದೇಶದಲ್ಲಿ ಅತಿ ಮೌಲ್ಯಯುತವಾದ ಸಂವಿಧಾನದ ಕಾನೂನುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಮೂಲಕ ಕಾನೂನಿಗೆ ಗೌರವಿಸು ವಂತಾಗಬೇಕು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಜಿ. ರಮಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಇತರ ದೇಶಗಳಿಗೆ ಹೋಲಿಸಿದರೆ ಭಾರತ ದೇಶದ ಸಂವಿಧಾನ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತೀಯರಾದ ಎಲ್ಲರೂ ಉತ್ತಮ ನ್ಯಾಯಾಂಗ ಹಾಗೂ ಪ್ರಜಾಪ್ರಭುತ್ವದÀ ವ್ಯವಸ್ಥೆಯಲ್ಲಿದ್ದೇವೆ. ದೇಶದ ಪ್ರಜೆಗಳಾಗಿರುವ ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಮೂಲಕ ಕಾನೂನಿಗೆ ತಲೆಬಾಗಲೇ ಬೇಕು. ಕಾನೂನು ಎಂಬದು ಸಮುದ್ರಕ್ಕಿಂತ ಆಳವಾದ ಅಸ್ತ್ರವಾಗಿದೆ. ಪ್ರಜೆಗಳು ಭಾರತದ ಪ್ರಜಾಪ್ರಭುತ್ವದ ಸಂವಿಧಾನಕ್ಕೆÀ ಗೌರವ ನೀಡುವದರೊಂದಿಗೆ ಕಾನೂನಿಗೆ ಸದಾ ಗೌರವ ನೀಡುವಂತಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ತಾ,ಕಾ,ಸೇವೆಗಳ ಸಮಿತಿ ಅಧ್ಯಕ್ಷ ಡಿ.ಆರ್.ಜಯಪ್ರಕಾಶ್ ಮಾತನಾಡಿ ಜನರಿಗೆ ಅನ್ಯಾಯವಾದಾಗ ನ್ಯಾಯಾಲಯಕ್ಕೆ ಬರುತ್ತಾರೆ ಅವರಿಗೆ ನ್ಯಾಯ ದೊರಕಿಸುವದು ನ್ಯಾಯಾಂಗದ ಆದ್ಯ ಕರ್ತವ್ಯವಾಗಿದೆ. ಸಂವಿಧಾನದ ಆಶಯಗಳಿಗೆ ಚುಕ್ಕಿ ಬಾರದ ಹಾಗೆ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಂಡು ಅದನ್ನು ಅಚ್ಚುಕಟ್ಟಾಗಿ ಪಾಲಿಸುವಂತಾಗಬೇಕು ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶÀ ಶಿವಾನಂದ ಲಕ್ಷ್ಮಣ ಅಂಚಿ ಅವರು ಮಾತನಾಡಿ ಸಂವಿಧಾನ ಎಂಬದು ಕಾನೂನಿನ ಪ್ರಬಲ ಭಂಡಾರವಾಗಿದ್ದರೂ ಕಾಲ ಕಾಲಕ್ಕೆ ಸಂದರ್ಭಕ್ಕನುಸಾರವಾಗಿ ನೂರಕ್ಕೂ ಹೆಚ್ಚು ತಿದ್ದುಪಡಿಯಾಗಿದೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾನೂನಿನ ರಕ್ಷಣೆಗೆ ಒತ್ತುಕೊಟ್ಟು ಸಂವಿಧಾನವನ್ನು ಯಾವದೇ ಕಾರಣಕ್ಕೂ ದ್ವೇಷಿಸಬೇಡಿ ಎಂದಿದ್ದಾರೆ ಎಂದು ನೆನೆಪಿಸಿದ ಅವರು ಪ್ರಜೆಗಳು ಮೂಲಭೂತ ಹಕ್ಕನ್ನು ಪಡೆಯಲು ಇಂದು ಕಾನೂನಿನ ರಕ್ಷಣೆ ಪಾಲನೆ ಅಗತ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ನ್ಯಾಯಾಲಯದ ಸಿಬ್ಬಂದಿ ಮಂಜುನಾಥ್ ಸ್ವಾಗತಿಸಿ, ಎ.ಜೆ. ಪ್ರದಿಪ್ ವಂದಿಸಿದರು.