ಮಡಿಕೇರಿ ನ.28 : ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮೂರು ದಿನಗಳ ಬೃಹತ್ ಹುಬ್ಬುನ್ನಬಿ ಸಮಾವೇಶ ತಾ.28 ರಿಂದ 30ರವರೆಗೆ ವೀರಾಜಪೇಟೆಯ ಆರ್ಜಿಯಲ್ಲಿರುವ ಅನ್ವರುಲ್ ಹುದಾ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಶಾಫಿ ಅನ್ವಾರಿ ಅವರು, ತಾ. 28 ರಂದು ಮುಂಜಾನೆ ಕೊಡಗಿನ ಸಾದಾತ್‍ಗಳು ಭಾಗವಹಿಸುವ ಬೃಹತ್ ಮೌಲಿದ್ ಮಜ್ಲಿಸ್‍ನೊಂದಿಗೆ ಸಮಾವೇಶದ ಉದ್ಘಾಟನೆ ನೆರವೇರಿಸಲಾಗಿದ್ದು, ಬಳಿಕ ಅನ್ವರುಲ್ ಹುದಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ ಸಯ್ಯದ್ ಸುಹೈಲ್ ಅಸ್ಸಖಾಫ್ ತಂಞಳ್ ನೇತೃತ್ವದಲ್ಲಿ ಪ್ರವಾದಿ ಪ್ರಕೀರ್ತನಾ ಕಾವ್ಯವಾದ ಬುರ್ದಾ ಮಜ್ಲಿಸ್ ನೆರವೇರಲಿದೆ ಎಂದು ಹೇಳಿದರು.