ಸೋಮವಾರಪೇಟೆ, ನ. 28: ಇಲ್ಲಿನ ಕೊಡವ ಸಮಾಜದ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಮಾಳೇಟಿರ ಅಭಿಮನ್ಯುಕುಮಾರ್ ಅವರು, ಸಮುದಾಯ ಭವನಗಳು ಮದುವೆ ಅಥವಾ ಶುಭಕಾರ್ಯ ಮಾಡುವ ಕಲ್ಯಾಣ ಮಂಟಪಗಳು ಮಾತ್ರ ಆಗದೆ ಸಾಮಾಜಿಕ ಸೇವೆ ಮಾಡುವಂತಹ ಕೇಂದ್ರಗಳೂ ಆಗಬೇಕೆಂದರು.

ಪ್ರಸಕ್ತ ಸಾಲಿನಲ್ಲಿ ನಡೆದ ಪ್ರಕೃತಿ ವಿಕೋಪ ಸಂದರ್ಭ ಸಾವಿರಾರು ಜನರು ಮನೆ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಸಂದರ್ಭ ಇಲ್ಲಿನ ಕೊಡವ ಸಮಾಜ ಅವÀರ ಸೇವೆಗೆ ಮುಂದಾಗಿದೆ. ಇದರೊಂದಿಗೆ ದಾನಿಗಳು, ಸಾರ್ವಜನಿಕರು, ಸ್ವಯಂ ಸೇವಕರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಸರಕಾರಿ ಇಲಾಖೆಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ತೇಲಪಂಡ ಕವನ್ ಕಾರ್ಯಪ್ಪ, ಉಪಾಧ್ಯಕ್ಷ ಬಾಚಿನಾಡಂಡ ಕೆ. ಪೂಣಚ್ಚ, ಖಜಾಂಚಿ ಮಣವಟ್ಟಿರ ಹರೀಶ್, ಸಹ ಕಾರ್ಯದರ್ಶಿ ಮೋಟನಾಳಿರ ಲವ್ವಿ, ನಿರ್ದೇಶಕರು ಗಳಾದ ಆಪಾಡಂಡ ವೀರರಾಜ್, ಕಾರ್ಯಪ್ಪಂಡ ಮೈನಾ, ಹೋರೇರ ಸೋಮಯ್ಯ, ಮರುವಂಡ ಸುರೇಶ್, ನಾಪಂಡ ಕುಶಾಲಪ್ಪ, ಕನ್ನಿಗಂಡ ಸುಭಾಶ್, ಪೋರೇರ ಶ್ಯಾಮ್ ಹರೀಶ್, ಪರುವಂಡ ಸರು ರಾಮಪ್ಪ ಉಪಸ್ಥಿತರಿದ್ದರು.