ಗೋಣಿಕೊಪ್ಪ ವರದಿ, ನ. 28 : ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿಕಲಚೇತನರ ಕ್ರೀಡಾಕೂಟದಲ್ಲಿ ದೃಷ್ಟಿ ನ್ಯೂನತೆ, ದೈಹಿಕ ನ್ಯೂನತೆ, ಶ್ರವಣದೋಷ ಹಾಗೂ ಬುದ್ಧಿಮಾಂಧ್ಯ ಮಕ್ಕಳು ವಿವಿಧ ಸ್ಫರ್ಧೆಯಲ್ಲಿ ಸಾಮಾನ್ಯ ಜನರಂತೆ ಪಾಲ್ಗೊಂಡು ಸಾಮಾನ್ಯ ಜನರ ಮನಸ್ಸು ಹಗುರಗೊಳಿಸಿದರು.

ಬಾಟಲಿಗೆ ಗುರಿ ಇಡುವದು, ಬಕೆಟ್‍ಗೆ ಬಾಲ್ ಹಾಕುವದು, ಬಲೂನ್ ಹೊಡೆಯುವದು, ಅದೃಷ್ಟದ ಆಟ, ಬಕೆಟ್‍ಗೆ ಚೆಂಡು ಹಾಕುವದು, ಚೆಂಡು ಹಿಡಿಯುವದು, ಬ್ರಶ್ ಬ್ಯಾಲೆನ್ಸಿಂಗ್, ರಿಂಗ್ ಎಸೆತ, ಬಾಂಬ್ ಇನ್ ದ ಸಿಟಿ ಹಾಗೂ ಕುರ್ಚಿಗೆ ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಪಾಲಿಬೆಟ್ಟ ಚೆಷೈರ್‍ಹೋಂ, ದೇವರಪುರ ಅಮೃತವಾಣಿ ಹಾಗೂ ವೀರಾಜಪೇಟೆ ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 120ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಜಿ. ಪಂ ಸದಸ್ಯ ಸಿ.ಕೆ. ಬೋಪಣ್ಣ, ಜಿಲ್ಲಾ ವಿಕಲಚೇತನ ಅಧಿಕಾರಿ ದೇವರಾಜ್, ಸತ್ಯಸಾಯಿ ಸಮಿತಿ ಪ್ರಮುಖರುಗಳಾದ ಬಿಂದು ಪೂಣಚ್ಚ, ಪೂಣಚ್ಚ, ಲೋಹಿತ್, ಅಶ್ವಿನಿ, ಗಿರೀಶ್, ಸ್ತ್ರೀಶಕ್ತಿ ಒಕ್ಕೂಟ ಕಾರ್ಯದರ್ಶಿ ರತ್ನ, ಗ್ರಾ. ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯೆ ರತಿ, ಚೆಷೈರ್‍ಹೋಂ ಅಧ್ಯಕ್ಷೆ ಗೀತಾ ಚೆಂಗಪ್ಪ, ಉಪಾಧ್ಯಕ್ಷರಾದ ಪುನಿತಾ ರಾಮಸ್ವಾಮಿ, ಮುಖ್ಯ ಶಿಕ್ಷಕ ಶಿವರಾಜ್ ಪಾಲ್ಗೊಂಡರು.

ಸ್ಪರ್ಧಾ ವಿಜೇತರುಗಳು : ಬಾಟಲಿಗೆ ಗುರಿ ಇಡುವದರಲ್ಲಿ ಮಂಜುಳ, ಎ. ಪಿ. ಭಾರತಿ, ಎಂ.ಕೆ. ಮಂಜುನಾಥ್, 100 ಮೀ. ಓಟದಲ್ಲಿ ಎಸ್. ವಿ. ಮಂಜುಳ, ಆಸೀಂ, ಅಜೀಜ್, ಬಕೆಟ್‍ಗೆ ಬಾಲ್ ಹಾಕುವದರಲ್ಲಿ ಹರಿಶ್ಚಂದ್ರ, ರೋಹಿಣಿ, ಹರ್ಷಿತಾ, ಬಲೂನ್ ಹೊಡೆಯುವದರಲ್ಲಿ ಕಿರಣ್‍ಕುಮಾರ್, ಮಹೇಂದ್ರ, ಕೆ. ಮಂಜುನಾಥ್, ಅದೃಷ್ಠದ ಆಟದಲ್ಲಿ ಸಂತೋಷ್, ಅಸ್ಮೀರ್, ಆರ್ಮುಗಾ, ವಾಕ್ ಹಾಗೂ ಶ್ರವಣದೋಷ ಉಳ್ಳವರಿಗೆ ನಡೆದ ಬಕೆಟ್‍ಗೆ ಚೆಂಡು ಹಾಕುವ ವಿಭಾಗದಲ್ಲಿ ನಾಚಪ್ಪ, ನಂಜಪ್ಪ, ಮಮತ, ಚೆಂಡು ಹಿಡಿಯುವದರಲ್ಲಿ ನಿರೀಕಾ, ಹರ್ಷಿತಾ, ಸುಬ್ಬಯ್ಯ ಬಹುಮಾನ ಪಡೆದರು.

ದೃಷ್ಟಿ ನ್ಯೂನತೆ ಉಳ್ಳವರಿಗೆ ನಡೆದ ಕುರ್ಚಿಗೆ ಹೊಡೆಯುವ ಸ್ಪರ್ಧೆಯಲ್ಲಿ ಸಿದ್ದಯ್ಯ, ಮಮ್ತಾಜ್, ಕೆ. ಮಂಜುನಾಥ್, ದೈಹಿಕ ಅಂಗವಿಕಲರಿಗೆ ನಡೆದ ರಿಂಗ್ ಎಸೆತದಲ್ಲಿ ಸರೋಜ, ಪೆಮ್ಮಯ್ಯ, ಸುಬ್ರಮಣಿ, ವಿಕೆಟ್ ಎಸೆತದಲ್ಲಿ ರಾಜು, ಗಾಯಿತ್ರಿ, ಜಾನ್ ಕ್ರಾಸ್ತ, ಬಾಂಬ್ ಇನ್ ದ ಸಿಟಿಯಲ್ಲಿ ಮೊಹಮ್ಮದ್ ರಫಿ, ಡ್ಯಾನಿಯಲ್, ಪಲ್ಲವಿ, ಶ್ರವಣದೋಷ ವಿಭಾಗಕ್ಕೆ ನಡೆದ ಬ್ರಶ್ ಬ್ಯಾಲೆನ್ಸಿಂಗ್‍ನಲ್ಲಿ ಜಯಶ್ರೀ, ಅಶಿತ್, ಹಂಪಿಕ, ಗುಂಪು ವಿಭಾಗದ ಚೆಂಡು ಹಿಡಿಯುವದರಲ್ಲಿ ಪ್ರಮೋದ್-ವಿನೋದ್, ವಿನೋದ್-ಮೊಹಮ್ಮದ್, ಅಕಿತಾ-ಯಶಸ್ವಿನಿ, ಬಾಲ್ ಬಕೆಟ್‍ಗೆ ಹಾಕುವದರಲ್ಲಿ ರಿಹಾಸ್, ಚಂದು, ಪ್ರದೀಪ್ ಬಹುಮಾನ ಪಡೆದುಕೊಂಡರು.

ಸಮಾರೋಪದಲ್ಲಿ ಉಪನ್ಯಾಸಕ ತಿರುಮಲ್ಲಯ್ಯ, ಅಮೃತವಾಣಿ ಶಾಲೆ ಮುಖ್ಯಶಿಕ್ಷಕಿ ಸುಧಾ, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಕಿಶೋರ್ ನಾಚಪ್ಪ, ಶಿಶು ಅಭಿವೃದ್ಧಿ ತಾಲೂಕು ಯೋಜನಾಧಿಕಾರಿ ಸೀತಾ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಚಾಲಕ ಅಂಕಚಾರಿ ಬಹುಮಾನ ವಿತರಿಸಿದರು.