ಸೋಮವಾರಪೇಟೆ, ನ. 28: ಮಹಿಳೆಯರು ಮೌಢ್ಯತೆಯಿಂದ ಹೊರಬಂದು ಜೀವನದಲ್ಲಿ ಆತ್ಮಸ್ಥೈರ್ಯವನ್ನು ರೂಢಿಸಿಕೊಳ್ಳ ಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೈ. ಪ್ರಕಾಶ್ ಕರೆ ನೀಡಿದರು.

ಎಸ್‍ಕೆಡಿಆರ್‍ಡಿಪಿ ವತಿಯಿಂದ ಇಲ್ಲಿನ ತಾಲೂಕು ಯೋಜನಾ ಧಿಕಾರಿಗಳ ಕಚೇರಿಯಲ್ಲಿ ಆಯೋಜಿಸ ಲಾಗಿದ್ದ ಒಕ್ಕೂಟ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಗತಿ ನಿಧಿ ವಿತರಿಸುವ ಮೂಲಕ ಸಮಾಜದ ಎಲ್ಲಾ ವರ್ಗದ ಮಂದಿಗೆ ಆರ್ಥಿಕ ಸ್ವಾವಲಂಬನೆ ತುಂಬಲಾಗುತ್ತಿದೆ. ಯೋಜನೆಯಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಕಾರ್ಯಕ್ರಮ ಯಶಸ್ಸುಗೊಳ್ಳಲು ಸಾಧ್ಯ ಎಂದರು. ಯೋಜನೆಯ ವಲಯ ಮೇಲ್ವಿಚಾರಕ ರಮೇಶ್ ಮಾತನಾಡಿ, ಒಕ್ಕೂಟದ ಪದಾಧಿಕಾರಿಗಳು ಆಯಾ ಒಕ್ಕೂಟದ ಸರ್ವ ಸದಸ್ಯರಿಗೆ ಯೋಜನೆಯ ಮಾಹಿತಿಗಳನ್ನು ತಲಪಿಸಬೇಕು ಎಂದರಲ್ಲದೇ, ಒಕ್ಕೂಟವಾರು ಸಾಧನೆ, ಆಗಬೇಕಿರುವ ಸುಧಾರಣೆಗಳ ಬಗ್ಗೆ ವಿಮರ್ಶೆ ಮಾಡಿದರು. ಸಭೆಯಲ್ಲಿ ವಿವಿಧ ಒಕ್ಕೂಟದ ಅಧ್ಯಕ್ಷರುಗಳಾದ ರುಕ್ಮಿಣಿ, ರೂಪ, ಅನಿಲ್‍ಕುಮಾರ್, ಗಂಗಮ್ಮ, ಶೃತಿ, ಕಲ್ಯಾಣಿ, ಈಶ್ವರಿ, ವಿನೋದ್‍ಕುಮಾರ್, ಮೀನಾಕ್ಷಿ, ಶಶಿಕುಮಾರ್, ವಾಸುದೇವ, ಸುವಿಧಾ ಸಹಾಯಕರಾದ ನಾಗವೇಣಿ, ಶಶಿಕಲಾ, ಉಷಾ, ವಾಣಿ, ಸೇವಾಪ್ರತಿನಿಧಿ ತಾರಾಲಕ್ಷ್ಮೀ, ಶೈಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.