ಸೋಮವಾರಪೇಟೆ, ನ. 28: ಮೈಸೂರಿನ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್.ಎಸ್. ವಿಜ್ಞಾನ ಸಂಘ ಮತ್ತು ಎಸ್.ವಿ.ಜಿ. ಸ್ಪರ್ಧಾತ್ಮಕ ಪರೀಕ್ಷಾ ಘಟಕದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ತಾಲೂಕಿನ ಜ್ಞಾನವಿಕಾಸ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.

ಶಾಲೆಯ ರಿತೇಶ್ ಲಾಲ್, ಕೌಶಿಕ್, ಐಸಿರಿ ಮತ್ತು ಲಾಲಿ ಅವರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇವರುಗಳಿಗೆ ವಿಶ್ವ ವಿಜ್ಞಾನ ದಸರಾ ಯುವ ವಿಜ್ಞಾನಿ-2018 ಪ್ರಶಸ್ತಿಯನ್ನು ನೀಡಲಾಯಿತು.