ಕೂಡಿಗೆ, ನ. 29: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಶ್ರೀ ಭಕ್ತ ಕನಕದಾಸ ಪುರುಷ ಸ್ವಸಹಾಯ ಸಂಘ ಹಾಗೂ ಚಿಕ್ಕತ್ತೂರು ಕನಕ ಬಡಾವಣೆ ಗ್ರಾಮಸ್ಥರ ವತಿಯಿಂದ ಚಿಕ್ಕತ್ತೂರು ಗ್ರಾಮದಲ್ಲಿ ಕನಕ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯ ಡಿ.ಎಸ್. ಗಣೇಶ ಉದ್ಘಾಟಿಸಿ ಕನಕದಾಸರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಜಾತಿಯ ವಿಶೇಷವಾಗಿ ಸಮಾನತೆ ಸಾರಿದವರಲ್ಲಿ ಮುಖ್ಯ ದಾಸರು ಎಂದರು.

ಮುಖ್ಯ ಅತಿಥಿಗಳಾಗಿದ್ದ ಕೂಡುಮಂಗಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಕೆ. ಭೋಗಪ್ಪ ಮಾತನಾಡಿ, ಕನಕದಾಸರ ವಚನಗಳು ಪ್ರಪಂಚದಲ್ಲಿ ಪ್ರಚಲಿತವಿರುವ ದಾಸರ ಭಕ್ತಿ ಗೀತೆಗಳು, ಅವರ ಗ್ರಾಮಾಭಿವೃದ್ಧಿಯ ಚಿಂತನೆ ಪ್ರಾಮಾಣಿಕವಾಗಿದವು ಎಂದರು. ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ಎಸ್. ವಸಂತ, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಅಶ್ವತ್ ಕಮಾರ, (ಮಂಜು), ಜಿಲ್ಲಾ ಕುರುಬ ಸಂಘದ ಉಪಾಧ್ಯಕ್ಷ ಗಣೇಶ, ತಾಲೂಕು ಸಂಗೊಳ್ಳಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪ್ರಭಾಕರ, ಕಾರ್ಯದರ್ಶಿಯಾಗಿ ಮಂಜುನಾಥ, ಚಿಕ್ಕತ್ತೂರು ಗ್ರಾಮದ ಭಕ್ತ ಕನಕದಾಸ ಸ್ವಸಹಾಯ ಸಂಘದ ಅಧ್ಯಕ್ಷ ರಗೇಗೌಡ, ಕಾರ್ಯದರ್ಶಿ ರವಿ ಸೇರಿದಂತೆ ಕನಕದಾಸರ ವಿವಿಧ ಸಂಘಗಳ ಪದಾಧಿಕಾರಿಗಳು, ಸಮಿತಿ ನಿರ್ದೇಶಕರು ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕಾರೇಕೊಪ್ಪಲು ಗ್ರಾಮದ ಗ್ರಾಮಸ್ಥರು ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.