ಮಡಿಕೇರಿ, ನ. 29: ಪೊನ್ನಂಪೇಟೆಯ ಕೊಡವ ಎಜುಕೇಷನ್ ಸೊಸೈಟಿಯ ವಿಶೇಷ ಮಹಾಸಭೆ ಹಾಗೂ 20ನೇ ವಾರ್ಷಿಕ ಮಹಾಸಭೆ ಡಿ. 1 ರಂದು (ನಾಳೆ) ಬೆಳಿಗ್ಗೆ 11 ಗಂಟೆಗೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾ ಲಜಿಯ ಆವರಣದಲ್ಲಿ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಚೆಪ್ಪುಡೀರ ಪಿ. ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿರುವದಾಗಿ ಸಂಸ್ಥೆಯ ಕಾರ್ಯದರ್ಶಿ ಸಿ.ಪಿ. ಪೂವಯ್ಯ (ರಾಕೇಶ್) ಅವರು ತಿಳಿಸಿದ್ದಾರೆ.