ಸಿದ್ದಾಪುರ, ನ. 29: ಕರ್ನಾಟಕ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ, ಕಾಫಿ ಬೆಳೆಗಾರ ಸಿದ್ದಾಪುರದ ಡಾ. ಪಿ.ಸಿ. ಹಸೈನಾರ್ ಹಾಜಿ ಅವರಿಗೆ ಕೇರಳದ ಕಣ್ಣೂರು ಜಿಲ್ಲೆಯ ಕರಿಪಾಲ್ ದೇವಾಲಯ ಟ್ರಸ್ಟ್ ವತಿಯಿಂದ ಧಾರ್ಮಿಕ ಹಾಗೂ ಸಮಾಜ ಸೇವೆಯ ಸಾಧನೆಗೆ ಕೇರಳ ರಾಜ್ಯ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿದರು.

ಕಣ್ಣೂರು ಜಿಲ್ಲೆಯ ಪೇರಂಬಡವ್ ಕರಿಪಾಲ್ ದೇವಸ್ಥಾನ ಟ್ರಸ್ಟ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೇರಳ ರಾಜ್ಯದ ಪ್ರವಾಸೋದ್ಯಮ ಸಚಿವ ಜಿ.ಎಸ್. ಸುನಿಲ್ ಕುಮಾರ್, ಡಾ. ಪಿ.ಸಿ. ಹಸೈನಾರ್ ಹಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಕೇರಳ ಹಾಗೂ ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷಗಳಿಂದ ರಾಜಕೀಯ, ಧಾರ್ಮಿಕ, ಸಮಾಜ ಸೇವೆ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಎಲ್ಲಾ ವರ್ಗದವರೊಂದಿಗೆ ಸೌಹಾರ್ದತೆಯೊಂದಿಗೆ ಗುರುತಿಸಿಕೊಂಡು ಸಾಧನೆ ಮಾಡಿರುವ ಡಾ. ಪಿ.ಸಿ. ಹಸೈನಾರ್ ಹಾಜಿ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮತ್ತೋರ್ವ ಸಮಾಜ ಸೇವಕ ಸೋಮನ್ ನಂಬಿಯಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಿ.ಸಿ. ಹಸೈನಾರ್ ಹಾಜಿ ಅವರ ಸಮಾಜ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಗ್ರೋಬಲ್ ಪೀಸ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಕರಪಾಲ್ ದೇವಾಲಯ ಟ್ರಸ್ಟ್ ಸಮಿತಿ ಅಧ್ಯಕ್ಷ ಶಿವದಾಸ್, ತಳಿಪರಂಬು ಡಿವೈಎಸ್ಪಿ ವೇಣುಗೋಪಾಲ್, ದುಬೈ ಶೇಕ್ ಪಬ್ಲಿಕ್ ರಿಲೇಷನ್ ನಿರ್ದೇಶಕ ಕೃಷ್ಣ ಕುಡಿಚೇರಿ, ಕಣ್ಣೂರು ಮಾಲ್ ಪಾಲುದಾರರು ಶಿವರಾಜು, ಆರೋಗ್ಯ ಇಲಾಖಾಧಿಕಾರಿ ದೇವದಾಸ್, ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೆಶಕ ಎಂ.ಪಿ. ಅಸಾನ್‍ಕುಂಞÂ, ಕಣ್ಣೂರು ಸರ್ವಕಲಾ ಸಿಂಡಿಕೇಟ್ ಸದಸ್ಯ ಸಂತೋಷ್ ಕುಮಾರ್, ಪಯ್ಯನೂರು ಆಸ್ಪತ್ರೆಗಳ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಕರಿಪಾಲ್ ಗ್ರಾ.ಪಂ. ಅಧ್ಯಕ್ಷೆ ಸತ್ಯಬಿಂದು, ಕ್ರೈಸ್ತ ಧರ್ಮಗುರು ಫಾದರ್ ಮ್ಯಾಥ್ಯೂ ಮುಲ್ಲಪಳ್ಳಿ, ಧಾರ್ಮಿಕ ಪ್ರಭಾಶಕ ಸಲೀಂ ವೈನಾಡ್ ಮತ್ತಿತರರು ಹಾಜರಿದ್ದರು.