ಮಡಿಕೇರಿ, ನ. 29: 16ನೇ ರಾಷ್ಟ್ರೀಯ ಅಂತರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ವಿಭಾಗದ ಸ್ಪರ್ಧೆಗೆ ಕ್ರೀಡಾಪಟುಗಳ ಆಯ್ಕೆಯು ಕೊಡಗು ಜಿಲ್ಲೆಯ ಅಥ್ಲೆಟಿಕ್ಸ್ ಅಸೋಸಿಯೇಷನ್‍ನಿಂದ ಗೋಣಿಕೊಪ್ಪದ ಕಾಲ್ಸ್ ಶಾಲೆಯಲ್ಲಿ ನಡೆಯಿತು. ಅದರಲ್ಲಿ ಆಯ್ಕೆಯಾದ 13 ಕ್ರೀಡಾಪಟುಗಳು ಹಾಗೂ ಇಬ್ಬರು ತರಬೇತಿದಾರರು ಆಂಧ್ರಪ್ರದೇಶದ ತಿರುಪತಿಯಲ್ಲಿ ಡಿ. 1 ರಿಂದ 3 ರವರೆಗೆ ನಡೆಯುವ 16ನೇ ರಾಷ್ಟ್ರೀಯ ಅಂತರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ವಿ. ಲೋಕೇಶ್ ಹಾಗೂ ಕಾರ್ಯದರ್ಶಿ ಜಯರಾಂ ರೈ ತಿಳಿಸಿದ್ದಾರೆ.

ಕ್ರೀಡಾಪಟುಗಳ ವಿವರ ಕೆಳಗಿನಂತಿದೆ: ಸಾಯಿದರ್ಶನ್ ಆರ್. (100 ಮೀ), ಶಿವಕುಮಾರ್ ಎನ್. (1000 ಮೀ), ಸಮೀರ್ ಪಾಷಾ (ಗುಂಡು ಎಸೆತ), ಭೀಮಾ ಶಂಕರ್ (600 ಮೀ), ಗಾನವಿ ಸಿ.ಟಿ. (400 ಮೀ), ಭೂಮಿಕಾ ಸಿ.ಹೆಚ್. (200 ಮೀ), ಸುನಿತ (100 ಮೀ) ಭವ್ಯ ಬಿ.ಯು (1000 ಮೀ) ಪ್ರಗತಿ ಎ.ಪಿ. (600 ಮೀ), ಭೂಮಿಕಾ ಕೆ.ಎನ್. (ಉದ್ದ ಜಿಗಿತ), ಶ್ರೀನಿಧಿ ಪಿ.ಎಸ್. (100 ಮೀ), ಪೂವಣ್ಣ ಕೆ.ಎನ್. (100 ಮೀ. ಹರ್ಡಲ್ಸ್), ನೀತು ಕೆ.ಟಿ. (100 ಮೀ) ಮತ್ತು ತರಬೇತುದಾರರಾಗಿ ಅಂತೋಣಿ ಡಿಸೋಜ ಹಾಗೂ ನಿಖಿತಾ ಜೋಸೆಫ್ ಪಾಲ್ಗೊಳ್ಳಲಿದ್ದಾರೆ.