ಮಡಿಕೇರಿ, ನ. 29: ಕೊಡಗಿನ ರಂಗಭೂಮಿ ಕಲಾವಿದ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ಕುಮಾರಿ ಪಾಂಡಂಡ ಅಕ್ಷತಾ (ನಾಯಕಿ) ಯಾಗಿ ನಟಿಸಿರುವ ಹೊಸ ಕನ್ನಡ ಧಾರಾವಾಹಿ ಡಿ. 12 ರಿಂದ ಪ್ರಸಾರವಾಗಲಿದೆ.

ಕನ್ನಡದ ಖ್ಯಾತ ನಿರ್ಮಾಪಕಿ ಶೃತಿನಾಯ್ಡು ನಿರ್ಮಿಸುತ್ತಿರುವ ‘ಶ್ರೀನಿ ಲವ್ಸ್ ಪದ್ದು’ ಧಾರಾವಾಹಿಯನ್ನು ಲೋಕೇಶ್ ನಿರ್ದೇಶಿಸುತ್ತಿದ್ದಾರೆ. ಪ್ರೇಮಕಥೆಯ ರೋಚಕ ಘಟನೆಗಳ ಈ ಧಾರಾವಾಹಿಯಲ್ಲಿ ಕಾರ್ಯಪ್ಪ ಕುಟುಂಬದ ಹಿರಿಯ ‘ತಾತ’ ನ ಪಾತ್ರ ನಿರ್ವಹಿಸುತ್ತಿದ್ದು. ಪಾಂಡಂಡ ಅಕ್ಷತಾ ಇವರ ಮೊಮ್ಮಗಳಾಗಿ ನಟಿಸುತ್ತಿದ್ದಾರೆ. ಕನ್ನಡದ ಅನೇಕ ಹಿರಿಯ ಕಿರುತೆರೆ ಕಲಾವಿದರು ನಟಿಸುತ್ತಿರುವ ಈ ಧಾರಾವಾಹಿ ಕಸ್ತೂರಿ ಚಾನಲ್‍ನಲ್ಲಿ ಡಿಸೆಂಬರ್ 12ರಿಂದ ರಾತ್ರಿ 9 ಗಂಟೆಗೆ ಪ್ರತಿದಿನ ಪ್ರಸಾರವಾಗಲಿದೆ.