ನಾಪೆÇೀಕ್ಲು, ನ. 29: ಗ್ರಾಮ ಸಭೆಗೆ ಹಾಜರಾಗದ ಇಲಾಖಾಧಿಕಾರಿ ಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ ತಿಳಿಸಿದರು.

ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿ.ಡಿ.ಪಿ ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ಗ್ರಾಮ ಮತ್ತು ನಮ್ಮ ಯೋಜನೆಯಡಿಯಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ 10 ವರ್ಷಗಳವರೆಗೆ ನಡೆಸಲಾಗುವ ಕಾರ್ಯ ಯೋಜನೆಗಳ ಪಟ್ಟಿಯನ್ನು ಈ ಗ್ರಾಮ ಸಭೆಯಲ್ಲಿ ತಯಾರಿಸಲಾಗುವದು. ಗ್ರಾಮಸ್ಥರು ಗ್ರಾಮಗಳ ಎಲ್ಲಾ ಸಮಸ್ಯೆಗಳು ಮತ್ತು ಕಾಮಗಾರಿಗಳ ಬಗ್ಗೆ ತಿಳಿಸಬಹುದು ಎಂದರು.

ಕೌಶಲ್ಯಾಭಿವೃದ್ಧಿ ಯೋಜನೆಯಡಿ ಯಲ್ಲಿ ಹಲವು ಸಾರ್ವಜನಿಕರು ಅರ್ಜಿ ಸಲ್ಲಿಸಲು ಇಲಾಖೆಗೆ ಸಂಬಂಧಿಸದ ಜನರಿಗೆ ಹಣ ನೀಡಿದ್ದು, ಈ ಬಗ್ಗೆ ಅದಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಸರಕಾರದ ಎಲ್ಲಾ ಯೋಜನೆಗಳು ಉಚಿತವಾಗಿದೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ನಾಪೆÇೀಕ್ಲುವಿನಲ್ಲಿ ಕ್ರೀಡಾ ಶಾಲೆ ಆರಂಭಿಸಬೇಕು. ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಲ್ಕು ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಎನ್.ಎಸ್. ಉದಯ ಶಂಕರ್ ಮಾತನಾಡಿ ಅಧಿಕಾರಿಗಳು ರೈತರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಕಾರ್ಮಿಕರ ಸಮಸ್ಯೆ, ಹೆಚ್ಚಿದ ಕೂಲಿ, ಬೆಳೆಗೆ ಸರಿಯಾದ ಬೆಲೆ ದೊರಕದಿರುವದರಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೂ ಈ ಬಗ್ಗೆ ಸರಿಯಾದ ವಿವರ ದೊರಕುತ್ತಿಲ್ಲ. ದೇಶ ಉಳಿದಿದ್ದರೆ ರೈತರಿಂದ ಮಾತ್ರ. ಆದುದರಿಂದ ಸರಕಾರ ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದರು.

ಬಿದ್ದಾಟಂಡ ಜಿನ್ನು ನಾಣಯ್ಯ ಮಾತನಾಡಿ ಗ್ರಾಮ ಸಭೆಗಳಿಗೆ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗಳು ಪಾಲ್ಗೊಳ್ಳುತ್ತಿದ್ದಾರೆ. ಇವರಿಂದ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ದೊರೆಯುತ್ತಿಲ್ಲ. ಇಲಾಖೆಯ ಮೇಲಾಧಿಕಾರಿಗಳು ಸಭೆಯಲ್ಲಿ ಹಾಜರಿರುವಂತೆ ಆದೇಶ ಹೊರಡಿಸಬೇಕು ಎಂದರು.

ಸಭೆಯಲ್ಲಿ ಬಸ್ ನಿಲ್ದಾಣ, ಕ್ರೀಡಾ ಶಾಲೆ, ತಾಂತ್ರಿಕ ಕಾಲೇಜು, ಕಸ ವಿಲೇವಾರಿ, ಕುಡಿಯುವ ನೀರಿನ ಶುದ್ಧೀಕರಣ, ಕಸ್ತೂರಿ ರಂಗನ್ ವರದಿ ಬಹಿಷ್ಕಾರದ ಬಗ್ಗೆ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕಲಿಯಂಡ ಹ್ಯಾರಿ ಮಂದಣ್ಣ, ಕೊಂಡಿರ ಗಣೇಶ್. ಪಾಡಿಯಮ್ಮಂಡ ಮನು ಮಹೇಶ್, ಕಂಗಾಂಡ ಜಾಲಿ ಪೂವಪ್ಪ, ತಿರೋಡಿರ ಮುದ್ದಯ್ಯ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಇ. ಇಸ್ಮಾಯಿಲ್ ವಹಿಸಿದ್ದರು. ಉಪಾಧ್ಯಕ್ಷ ಕಾಳೇಯಂಡ ಸಾಬಾ ತಿಮ್ಮಯ್ಯ, ಎಲ್ಲಾ ಸದಸ್ಯರು, ಅಭಿವೃದ್ಧಿ ಅಧಿಕಾರಿ ಟಿ.ಆರ್.ಕೇಶವ್, ಸಿಬ್ಬಂದಿಗಳಾದ ನಂದಿನಿ, ತಂಗಮ್ಮ, ನಿರನ್, ವೇಣು ಸುಬ್ಬಯ್ಯ, ಕುಟ್ಟಪ್ಪ, ಸರ್ಲಿ ಇದ್ದರು.