ಸೋಮವಾರಪೇಟೆ, ನ. 29: ಸಮೀಪದ ಚೌಡ್ಲು ಗ್ರಾ.ಪಂ.ಯ ಅಧ್ಯಕ್ಷರಾಗಿ ರಮ್ಯ ಕರುಣಾಕರ ಅವರು ಆಯ್ಕೆಯಾಗಿದ್ದಾರೆ.

ಇದುವರೆಗೆ ಅಧ್ಯಕ್ಷರಾಗಿದ್ದ ವನಜಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರಮ್ಯ ಕರುಣಾಕರ ಅವರು 10 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷೆಯಾಗಿ ಆಯ್ಕೆಯಾದರು.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಮತ್ತೋರ್ವ ಅಭ್ಯರ್ಥಿ ವಿ.ಎಸ್. ಜಯಲಕ್ಷ್ಮೀ 2 ಮತಗಳನ್ನು ಪಡೆದರು. ಒಟ್ಟು 14 ಸದಸ್ಯರಿರುವ ಪಂಚಾಯಿತಿಯಲ್ಲಿ 12 ಮಂದಿ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಇಬ್ಬರು ಸದಸ್ಯರು ಗೈರಾಗಿದ್ದರು.

ಬೆಳಿಗ್ಗೆ 10ಕ್ಕೆ ಚುನಾವಣೆ ಪ್ರಕ್ರಿಯೆ ನಡೆದು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರು ರಮ್ಯ ಕರುಣಾಕರ ಅವರ ಆಯ್ಕೆಗೆ ಒತ್ತು ನೀಡುವ ಮೂಲಕ ಪಕ್ಷಾತೀತ ರಾಗಿ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿಕೊಟ್ಟರು. ಪಂಚಾಯಿತಿಯಲ್ಲಿ 5 ಬಿಜೆಪಿ, 8 ಕಾಂಗ್ರೆಸ್ ಹಾಗೂ 1 ಜೆಡಿಎಸ್ ಸದಸ್ಯ ಬಲ ಹೊಂದಿದೆ.

ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಕಾರ್ಯನಿ ರ್ವಹಿಸಿದರು. ಪಂಚಾಯಿತಿ ಸದಸ್ಯರಾದ ಕೆ.ಆರ್. ದಿವ್ಯ, ಎಸ್.ಆರ್. ನತೀಶ್ ಮಂದಣ್ಣ, ಸಿ.ಎಸ್. ಅಜೀಜ್, ಸಿ.ಸಿ. ನಂದ, ಹೆಚ್.ಜಿ. ನರಸಿಂಹ, ನಾಗಮ್ಮ ಚಂದ್ರ, ಕೆ.ಎನ್. ದೇವಿಪ್ರಸಾದ್, ಎ. ವನಜಾ, ಕೆ.ಜೆ. ಗಿರೀಶ್, ಶಾರದÀ ಕಿಟ್ಟು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಬೆಂಬಲಿತ ಎ.ಎಸ್. ಧರ್ಮ ಹಾಗೂ ಕಾಂಗ್ರೆಸ್ ಬೆಂಬಲಿತ ಲೋಲಾಕ್ಷಿ ಬೋಜರಾಜ್ ಗೈರಾಗಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಯನ ಉಪಸ್ಥಿತರಿದ್ದರು.