ಚೆಟ್ಟಳ್ಳಿ, ನ. 29: ನೆಲ್ಲಿಹುದಿಕೇರಿ ಸಮೀಪದ ಫಲಾಹುಲ್ ಇಸ್ಲಾಂ ಸಭಾ ಆಡಳಿತ ಮಂಡಳಿ ನಲ್ವತ್ತೇಕರೆ ಇವರ ವತಿಯಿಂದ ಮೊಹಮ್ಮದ್ ಪೈಗಂಬರರ 1493 ನೇ ಜನ್ಮದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಧ್ವಜಾರೋಹಣವನ್ನು ಮಹಲ್ ಅಧ್ಯಕ್ಷ ಬೀರಾನ್ ಕುಟ್ಟಿ ಹಾಜಿ ನೆರವೇರಿಸಿದರು. ಜಮಾಅತ್ ಖತೀಬ ರಫೀಕ್ ಬಾಖವಿ ದುಹಾನೊಂದಿಗೆ ಈದ್ ಮಿಲಾದ್ ಸಂದೇಶ ಜಾಥಾಗೆ ಚಾಲನೆ ನೀಡಿದರು. ನಂತರ ಮಕ್ಕಳ ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭ ವೇದಿಕೆಯಲ್ಲಿ ಮಹಲ್ ಅಧ್ಯಕ್ಷ ಬೀರಾನ್ ಕುಟ್ಟಿ ಹಾಜಿ, ಹಂಸ ಫೈಝಿ, ನೌಷಾದ್, ಶಾಲಿ, ಅಲವಿ ಮೌಲವಿ, ಯೂಸೂಫ್ ಉಸ್ತಾದ್, ಸ್ವಾಗತ ಕಮಿಟಿ ಅಧ್ಯಕ್ಷ ಸಂಶು, ಕಾರ್ಯದರ್ಶಿ ಅಬ್ದುಲ್ ಸಲಾಂ, ರಿಯಾಜ್, ರಹೀಮ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಂಶೀರ್ ಮತ್ತಿತರರು ಇದ್ದರು.