ಒಡೆಯನಪುರ, ನ. 29: ದೀನ ದಲಿತರು, ಹಿಂದುಳಿದ ವರ್ಗದವರ ಏಳಿಗೆಗಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲರ ಬದುಕಿಗೆ ಆಶಾಕಿರಣವಾಗಿದೆ ಎಂದು ಹಾಸನದ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಿ. ಶಂಕರ್ ಹೊಸಕೆರೆ ಅಭಿಪ್ರಾಯಪಟ್ಟರು. ಸಮೀಪದ ನಿಂಗಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಆದಿ ದ್ರಾವಿಡ ಸಮಾಜದ ಜಾಗೃತಿ ಸಭೆ ಮತ್ತು ನೂತನ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ತುಳು ಭಾಷೆಯನ್ನು ಮಾತನಾಡುವ ಆದಿ ದ್ರಾವಿಡ ಜನಾಂಗ ಮೂಲ ದಕ್ಷಿಣ ಕನ್ನಡ ಜಿಲ್ಲೆಯವ ರಾಗಿದ್ದು, ಹಲವು ವರ್ಷಗಳಿಂದ ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಕಾಸರಗೋಡು ಮುಂತಾದ ಜಿಲ್ಲೆಗಳಿಗೆ ವಲಸೆ ಹೋಗಿ ವಿವಿಧ ರೀತಿಯ ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರು. ಆದಿ ದ್ರಾವಿಡ ಜನಾಂಗದವರಲ್ಲಿ ಶಿಕ್ಷಣದ ಬಗ್ಗೆ, ಜಾತಿ ದೃಢೀಕರಣ ಮುಂತಾದ ಸೇವೆಗಳ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಸರಕಾರದ ಸೌಲಭ್ಯ, ಸವಲತ್ತುಗಳಿಂದ ವಂಚಿತಗೊಂಡು ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನಾಂಗದವರು ತಮ್ಮ ಬಾಂಧವರಿಂದ ಶಿಕ್ಷಣ, ಸೇವೆ ಸವಲತ್ತು ಮುಂತಾದವಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು ಅದೇ ರೀತಿ ಜನಾಂಗ ಬಾಂಧವರು ಸಮುದಾಯದ ಏಳಿಗೆಗಾಗಿ ಬೆಂಬಲಿಸಿ ಪ್ರೋತ್ಸಾಹಿಸುವ ಮೂಲಕ ಜನಾಂಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಹಕರಿಸುವಂತೆ ಮನವಿ ಮಾಡಿದರು.

ಕೊಡಗು ಜಿಲ್ಲಾ ಆದಿ ದ್ರಾವಿಡ ಸಮಾಜದ ಉಪಾಧ್ಯಕ್ಷ ಜಿ. ಕುಶಾಲಪ್ಪ ಮಾತನಾಡಿ, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಉಪಯೋಗ ವನ್ನು ಸಮಾಜ ಬಾಂಧವರು ಅರ್ಥ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು, ಆ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು. ಆದಿ ದ್ರಾವಿಡ ಸಮಾಜ ವತಿಯಿಂದ ಗ್ರಾಮಗಳಲ್ಲಿ ಸಮಿತಿ, ಹಾಗೂ ಸಂಘಗಳನ್ನು ರಚಿಸಲಾಗಿದೆ, ಈ ಮೂಲಕವಾಗಿ ಸಮುದಾಯಕ್ಕೆ ಸರಕಾರದಿಂದ ಸಿಗುವ ಸೇವೆ ಸವಲತ್ತುಗಳನ್ನು ಪಡೆದುಕೊಳ್ಳಬೇಕು, ಸಮುದಾಯದ ಏಳಿಗೆಗಾಗಿ ಕಾನೂನು ಮೂಲಕ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡುವಂತೆ ಸಲಹೆ ಮಾತನಾಡಿ, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಉಪಯೋಗ ವನ್ನು ಸಮಾಜ ಬಾಂಧವರು ಅರ್ಥ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು, ಆ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.