ಗ್ರಾಮಸ್ಥರ ಆತಂಕ

ಗೋಣಿಕೊಪ್ಪ ವರದಿ, ನ. 29 : ನಿಟ್ಟೂರು-ಕಾರ್ಮಾಡು ಗ್ರಾಮ ವ್ಯಾಪ್ತಿಯಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಭೆ ಸೇರಿ ಒತ್ತಾಯಿಸಿದರು.

ಅಲ್ಲಿನ ವಿಜಯ ಗ್ರಾಮೀಣ ಯುವಕ ಸಂಘ ಸಭಾಂಗಣದಲ್ಲಿ ಗ್ರಾಮಸ್ಥರೇ ಆಯೋಜಿಸಿದ್ದ ಸಭೆಯಲ್ಲಿ ಈ ಭಾಗಗಳಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು. ಗ್ರಾಮದ ಬೆಳೆಗಾರ ಬಲ್ಯಮೀದೇರೀರ ಕಾವೇರಪ್ಪ ಎಂಬುವವರ ತೋಟಕ್ಕೆ ನುಗ್ಗಿ ಕಳವು ಯತ್ನ, ಕರ್ತಮಡ ಭಾಗ್ಯ ಎಂಬವರ ತೋಟದಿಂದ ಕಳವು ಶ್ರೀಗಂಧ ಮರ ಕಳ್ಳತನ, ಕಾಫಿ, ಕಾಳುಮೆಣಸು ನಿರಂತರ ಕಳವು ಪ್ರಕರಣವನ್ನು ಪೊಲೀಸರು ನಿರ್ಲಕ್ಷಿಸಿದ್ದಾರೆ.

ರಾತ್ರಿ ಓಡಾಡುವ ಆಟೋ, ಇನ್ನಿತರ ವಾಹನಗಳ ಬಗ್ಗೆ ಪೊಲೀಸರು ನಿಗಾ ವಹಿಸಬೇಕು, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಹೆಚ್ಚಾಗಿದ್ದು, ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಲಿ. ಬೆಳೆ ಕಳ್ಳತನ ನಿರಂತರವಾಗಿದೆ ಎಂದು ಬೆಳೆಗಾರರು ಸಮಸ್ಯೆ ಹಂಚಿಕೊಂಡರು. ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಪವನ್ ಚಿಟ್ಯಪ್ಪ, ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್, ಅರ್‍ಎಂಸಿ ಸದಸ್ಯ ಸುಜಾ ಪೂಣಚ್ಚ, ವಿಜಯ ಗ್ರಾಮೀಣ ಯುವಕ ಸಂಘ ಅಧ್ಯಕ್ಷ ಕಟಿಮಾಡ ಧೀರಜ್, ಪ್ರಮುಖರುಗಳಾದ ಗಾಣಂಗಡ ಸುದೀಪ್, ಕಾಟಿಮಾಡ ಶರೀನ್ ಇತರರು ಪಾಲ್ಗೊಂಡಿದ್ದರು. - ಸುದ್ದಿಪುತ್ರ