ಗೋಣಿಕೊಪ್ಪ ವರದಿ, ನ. 29: ಉತ್ತರಾಖಂಡ ರಾಜ್ಯದ ನೆಹರು ಇನ್‍ಸ್ಟಿಟ್ಯೂಟ್ ಆಫ್ ಮೌಂಟೆನೇರಿಂಗ್ ಸಂಸ್ಥೆ ಆಯೋಜಿಸಿದ್ದ 40 ದಿನಗಳ ಪರ್ವತಾರೋಹಣ ತರಬೇತಿಗೆ ಭಾಗವಹಿಸಿದ್ದ ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ರಾಹುಲ್ ಚಿನ್ನಪ್ಪ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.

ಸಮುದ್ರ ಮಟ್ಟದಿಂದ 17,500 ಅಡಿ ಎತ್ತರವಿರುವ ಉತ್ತರಕಾಶಿಯ ಪರ್ವತವನ್ನು ಏರುವದರ ಮೂಲಕ ಹಿರಿಮೆ ತಂದಿದ್ದಾರೆ ಎಂದು ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಕಾವೇರಿ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ ಮಾತನಾಡಿ, ಪಠ್ಯದ ಜೊತೆಗೆ ಪರಿಸರ ಕಾಳಜಿ ಮೂಡಿಸುವ ಇಂತಹ ಚಾರಣಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು. ಪದವಿ ಕಾಲೇಜು ಪ್ರಾಂಶುಪಾಲ ಎಸ್.ಎಸ್.ಮಾದಯ್ಯ, ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಆರ್. ಉಷಾಲತ, ಕಚೇರಿ ಅಧೀಕ್ಷಕ ಸೀತಾಲಕ್ಷ್ಮಿ, ಎನ್.ಸಿ.ಸಿ. ಅಧಿಕಾರಿ ಎಂ.ಆರ್. ಅಕ್ರಂ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಸಂಚಾಲಕ ತಿರುಮಲಯ್ಯ ಉಪಸ್ಥಿತರಿದ್ದರು.