ಸೋಮವಾರಪೇಟೆ, ನ. 29: ತಾಲೂಕಿನ ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಸುಗಮ ಸಂಗೀತ ಮತ್ತು ಭಾವಗೀತೆ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿಯ ಸಂತ ಮೈಕಲರ ಪ್ರೌಢÀಶಾಲೆಯ ನಿವೃತ್ತ ಶಿಕ್ಷಕಿ ಅನಸೂಯ, ಮನಸ್ಸಿನಲ್ಲಿ ಹುದುಗಿರುವ ಭಾವನೆಗಳನ್ನು ಕವನದ ಮೂಲಕ ವ್ಯಕ್ತಪಡಿಸಬಹುದಾದರೂ ಅವುಗಳ ರಚನೆಯ ಗುಣಮಟ್ಟದತ್ತ ಗಮನ ಹರಿಸಬೇಕು ಎಂದರು.

ಬರೆಯುವದೆಲ್ಲವೂ ಕವನದ ರೂಪ ಪಡೆಯಲು ಸಾಧ್ಯವಿಲ್ಲ. ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭ ಬರವಣಿಗೆಯ ಶೈಲಿ, ಭಾಷೆಯ ಗುಣಮಟ್ಟವೂ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಸಿ.ಜಿ. ಮಂದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಸೀತಾ ಚಿಟ್ಟಿಯಪ್ಪ, ನಿವೃತ್ತ ಶಿಕ್ಷಕ, ನೃತ್ಯ ಕಲಾವಿದ ಬಿ.ಸಿ. ಶಂಕರಯ್ಯ ಉಪಸ್ಥಿತರಿದ್ದರು.

ಆಕಾಶವಾಣಿ ಕಲಾವಿದ ಶಾಂತಳ್ಳಿ ಗಣೇಶ್ ಮತ್ತು ತಂಡದವರಿಂದ ಸುಗಮ ಸಂಗೀತ ಮತ್ತು ಭಾವಗೀತೆ ಗಾಯನ ಕಾರ್ಯಕ್ರಮ ನಡೆಯಿತು.