ವೀರಾಜಪೇಟೆ, ನ. 30: ವೀರಾಜಪೇಟೆ ನಗರದ ವ್ಯಾಪ್ತಿಗೆ ಸೀಮಿತವಾಗಿ ಐ.ಪಿ.ಎಲ್. ಮಾದರಿಯಲ್ಲಿ ನಗರದ ಕ್ರಿಕೆಟ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಯುತ್ ಫ್ರೆಂಡ್ಸ್ ವೀರಾಜಪೇಟೆ ಸಂಸ್ಥೆಯು ಟಿನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಅಯೋಜಿಸಿದೆ ಎಂದು ಸಂಸ್ಥೆಯ ಅಯೋಜಕರು ತಿಳಿಸಿದ್ದಾರೆ.

ಮ್ಯಾಗ್ನೋಲಿಯ ವಿಲಾಸಿ ಕೇಂದ್ರದಲ್ಲಿ ಯೂತ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಆಟಗಾರರನ್ನು ಹರಾಜು ಮೂಲಕ ಅಯ್ಕೆ ಮಾಡುವ ಕಾರ್ಯಕ್ರಮ ಅಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿದ ಕ್ರೀಡಾ ಪಟು ಮತ್ತು ಶಿಕ್ಷಕ ಸುದೇಶ್ ಮಾತನಾಡಿ ಕ್ರಿಕೆಟ್ ಯುವಕರ ಮನಸ್ಥಿತಿಯನ್ನು ಒಂದೇ ವೃತ್ತದಲ್ಲಿ ಕೇಂದ್ರೀಕರಿಸುವ ಕ್ರೀಡೆಯಾಗಿದ್ದು, ದೇಶದ ಹಲವಾರು ಕ್ರೀಡಾಪಟುಗಳು ಕ್ರಿಕೆಟ್‍ನಲ್ಲಿ ತಮ್ಮ ಹೆಸರು ಅಜರಾಮವಾಗಿ ನೆಲೆನಿಲ್ಲುವಂತೆ ಮಾಡಿದೆ. ವಿ.ಪಿ.ಎಲ್. ನಗರದಲ್ಲಿ ಅಯೋಜನೆ ಮಾಡುತ್ತಿರುವದರಿಂದ ಸ್ಥಳಿಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ. ಬಹುಮುಖ ಪ್ರತಿಭೆಗಳನ್ನು ನೋಡುವ ಮತ್ತು ಕ್ರೀಡೆಯಿಂದ ವಿಶೇಷತೆಗಳನ್ನು ಅರಿಯಬಹುದು ಎಂದು ಹೇಳಿದರು.

ಪಂದ್ಯಾಟದ ಅಯೋಜಕ ಶಹವಾಜ್ ಮಾತನಾಡಿ ವೀರಾಜಪೇಟೆ ನಗರದ ವ್ಯಾಪ್ತಿಯಲ್ಲಿ ಬರುವ ಯುವಕರನ್ನು ಗುರುತಿಸಿ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಿಕೆಟ್ ಕ್ರೀಡೆಯನ್ನು ಪ್ರೋತ್ಸಾಹಿಸುವ ವೇದಿಕೆಯಾಗಿದೆ. ನಗರದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ತಾ. 23 ರಂದು ಅಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಆಧ್ಯ ಕ್ರಿಕೆಟರ್ಸ್ ವೀರಾಜಪೇಟೆ, ಚಾಲೆಂಜರ್ಸ್ ವೀರಾಜಪೇಟೆ, ಮೆಟ್ರೊ ಜಯ ಮತ್ತು ಕೊ, ಸ್ಪಿರೀಟ್ ಬಾಯ್ಸ್ ವೀರಾಜಪೇಟೆ, ರೀ ಶೇಪ್ ಫಿಟ್ನೆಸ್ ಕ್ಲಬ್ ವೀರಾಜಪೇಟೆ, ಕೊ ಬಾಯ್ಸ್ ವೀರಾಜಪೇm,É ಸ್ಪೈಸಸ್ ವೀರಾಜಪೇಟೆ, ಕೂರ್ಗ್ ಟೈಗರ್ಸ್ ವೀರಾಜಪೇಟೆ, ರಾಯಲ್ ಫ್ರೆಂಡ್ಸ್ ವೀರಾಜಪೇಟೆ, ರಾಯಲ್ ರಜತದ್ರಿಯಸ್ ವೀರಾಜಪೇಟೆ ಸೇರಿ ಒಟ್ಟು 10 ತಂಡಗಳು ಪ್ರಥಮ ಹಂತದಲ್ಲಿ ಒಟ್ಟು 20 ಆಟಗಾರರನ್ನು ಹರಾಜು ಮೂಲಕ ಖರೀದಿಸಿದ್ದಾರೆ. ಉಳಿದ 110 ಮಂದಿ ಆಟಗಾರರನ್ನು ಮುಂದಿನ ನಿಗದಿಗೊಳಿಸಿದ ದಿನದಲ್ಲಿ ಅಯ್ಕೆಗೊಳಿಸಲಾಗುತ್ತದೆ.

ಪ್ರಥಮ, ದ್ವಿತೀಯ ಹಾಗೂ ಉತ್ತಮ ಆಟಗಾರರಿಗೆ ಅಕರ್ಷಕ ಟ್ರೋಫಿ ಮತ್ತು 50,000ಕ್ಕೂ ಅಧಿಕ ನಗದು ನೀಡಲಾಗುತ್ತಿದೆ ಎಂದು ಅಯೋಜಕರಾದ ನಿತಿನ್, ಅಭಿಲಾಶ್ ಮತ್ತು ಇಂತಿಯಾಜ್ ಮಾಧ್ಯಮ ಪ್ರತಿನಿಧಿಗಳಿಗೆ ವಿ.ಪಿ.ಎಲ್. ಬಗ್ಗೆ ಮಾಹಿತಿ ನೀಡಿದರು.

ಕ್ರೀಡೆಯ ಬಗ್ಗೆ ವಕೀಲ ಧ್ರುವ ಕುಮಾರ್ ಮತ್ತು ಪ.ಪಂ. ಸದಸ್ಯ ಮೊಹಮ್ಮದ್ ರಾಫಿ ಅವರುಗಳು ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಹರ್ಷವರ್ಧನ , ಅಗಸ್ಟಿನ್ ಡೆನ್ನಿಸ್, ಡಿ.ಪಿ. ರಾಜೇಶ್ ಪದ್ಮನಾಭ,ಮತ್ತು ಸಿ.ಕೆ. ಪ್ರಥ್ವಿನಾಥ್ ಮತ್ತು ಜಲೀಲ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ನಗರ ಭಾ.ಜ.ಪ. ಅಧ್ಯಕ್ಷ ಅಂಜಪರುವಂಡ ಅನಿಲ್ ಮಂದಣ್ಣ ಎಸ್.ಡಿ.ಪಿ.ಐ. ಶರೀಫ್ ಮತ್ತು ಭಾ.ಜ.ಪ. ಮುಖಂಡ ಜೋಕಿಂ ರೋಡ್ರಿಗಸ್, ಹಿರಿಯ ಅಟಗಾರ ಅಲ್ತಾಫ್ ಅವರುಗಳು ಉಪಸ್ಥಿತರಿದ್ದರು.

- ಕೆ.ಕೆ.ಎಸ್.