ಗೋಣಿಕೊಪ್ಪ ವರದಿ, ನ. 30 : ಹಾಕಿ ಕೂರ್ಗ್ ವತಿಯಿಂದ ಪೆÇನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆರಂಭ ಗೊಂಡ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಹಾಕಿ ಟೂರ್ನಿಯಲ್ಲಿ 7 ತಂಡಗಳು ಗೆದ್ದು ಶುಭಾರಂಭ ಮಾಡಿವೆ.

ಬಾಲಕರ ವಿಭಾಗ : ಶ್ರೀರಾಮ ಟ್ರಸ್ಟ್ ತಂಡವು ರೂಟ್ಸ್ (ಬಿ) ಹಾಗೂ ಭಾರತೀಯ ಕೊಡಗು ವಿದ್ಯಾಲಯ ತಂಡಗಳ ವಿರುದ್ದ ಗೆಲವು ದಾಖಲಿಸಿದವು. ಮೊದಲ ಪಂದ್ಯದಲ್ಲಿ ರೂಟ್ಸ್ ಬಿ. ವಿರುದ್ಧ 5-0 ಗೋಲುಗಳಿಂದ ಗೆದ್ದು ಬೀಗಿತು. ರಾಮ ಪರ 3 ಹಾಗೂ 11 ನೇ ನಿಮಿಷಗಳಲ್ಲಿ ನಾಚಪ್ಪ, 1 ರಲ್ಲಿ ನಿರೂಪ್, 10 ರಲ್ಲಿ ಸೂರ್ಯ, 19 ರಲ್ಲಿ ಮುತ್ತಣ್ಣ ಗೋಲು ಬಾರಿಸಿದರು.

ಮತ್ತೊಂದು ಪಂದ್ಯದಲ್ಲಿ ಶ್ರೀರಾಮ ತಂಡ ಭಾರತೀಯ ಕೊಡಗು ವಿದ್ಯಾಲಯ ತಂಡದ ವಿರುದ್ಧ 2-1 ಗೋಲುಗಳಿಂದ ಜಯಿಸಿತು. ಶ್ರೀರಾಮ ಪರ. 1 ಹಾಗೂ 21 ನೇ ನಿಮಿಷಗಳಲ್ಲಿ ಮುತ್ತಣ್ಣ 2 ಗೋಲು, ವಿದ್ಯಾಲಯ ಪರ 9 ರಲ್ಲಿ ತುಷಾರ್ ಗೋಲು ಹೊಡೆದರು.

ಪ್ರಗತಿ, ಕಾಲ್ಸ್, ಶ್ರೀರಾಮ ಟ್ರಸ್ಟ್, ರೂಟ್ಸ್ (ಎ) ತಂಡಗಳು ಗೆಲವು ದಾಖಲಿಸಿದವು. ದಿನದಲ್ಲಿ ಎರಡು ಪಂದ್ಯವಾಡಿದ ಶ್ರೀರಾಮ ತಂಡವು 2 ಗೆಲುವು ದಾಖಲಿಸಿತು.

ಪ್ರಗತಿ ತಂಡವು ಎಸ್ ಎಂ ಎಸ್ ವಿರುದ್ದ 2-1 ಗೋಲುಗಳ ಗೆಲುವು ದಾಖಲಿಸಿತು. ಪ್ರಗತಿ ಪರ 6 ಹಾಗೂ 7 ನೇ ನಿಮಿಷಗಳಲ್ಲಿ ಮಾeóï 2 ಗೋಲು ಹೊಡೆದು ಗೆಲವಿನ ರೂವಾರಿಯಾದರು. ಎಸ್.ಎಂ.ಎಸ್. ಪರ 9 ನೇ ನಿಮಿಷದಲ್ಲಿ ಅಚಲ್ ದೇವಯ್ಯ 1 ಗೋಲು ಹೊಡೆದರು.

ಕಾಲ್ಸ್ ತಂಡವು ಕಾಪ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಕಾಲ್ಸ್ ಪರ 19 ರಲ್ಲಿ ನಿಯಾಮ್, 20 ರಲ್ಲಿ ಕುನಲ್ ಉಮೇಶ್ ತಲಾ ಒಂದೊಂದು ಗೋಲು ಹೊಡೆದರು.

ರೂಟ್ಸ್ (ಎ) ತಂಡವು ಮಡಿಕೇರಿ ಸರ್ಕಾರಿ ಶಾಲೆ ತಂಡವನ್ನು 3-0 ಗೋಲುಗಳಿಂದ ಮಣಿಸಿತು. ರೂಟ್ದ್ ಪರವಾಗಿ 24 ರಲ್ಲಿ ಆಶಿಕ್, 25 ರಲ್ಲಿ ಮಿಥುನ್, 26 ರಲ್ಲಿ ಚಂಗಪ್ಪ ತಲಾ ಒಂದೊಂದು ಗೋಲು ಹೊಡೆದರು.

ಬಾಲಕಿಯರ ವಿಭಾಗ ; ಸೆಂಟ್ ಆಂಥೋನಿ ತಂಡವು ರೂಟ್ಸ್ (ಬಿ) ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಆಂಥೋನಿ ಪರ 17, 18, 20 ನೇ ನಿಮಿಷಗಳಲ್ಲಿ ಚೇತನ ಹ್ಯಾಟ್ರಿಕ್ ಗೋಲು ಬಾರಿಸಿ ಸಂಚಲನ ಮೂಡಿಸಿದರು. 2 ನೇ ಪಂದ್ಯದಲ್ಲಿ ಭಾರತೀಯ ಕೊಡಗು ವಿದ್ಯಾಲಯ ತಂಡವು ಸೆಂಟ್ ಆಂಥೋನಿ ತಂಡದ ವಿರುದ್ಧ 2-0 ಗೋಲುಗಳಿಂದ ಗೆದ್ದು ಬೀಗಿತು. ವಿದ್ಯಾಲಯ ಪರ 2 ರಲ್ಲಿ ತ್ರೇಯಾ, 11 ರಲ್ಲಿ ಸುನೈನಾ ತಲಾ ಒಂದೊಂದು ಗೋಲು ಹೊಡೆದರು.

ವರದಿ : ಸುದ್ದಿಪುತ್ರ