ಭಾಗಮಂಡಲ, ನ. 30: ಸಾಂದೀಪನಿ ಶಾಲೆ, ಚೆಟ್ಟಿಮಾನಿಯಲ್ಲಿ ನಡೆದ ಅಂತರ್ರಾಷ್ಟ್ರೀಯ ಶಾವಲಿನ್ ಕುಂಗ್‍ಫು ಪರೀಕ್ಷೆಯಲ್ಲಿ ಮುಖ್ಯ ಪರಿವೀಕ್ಷಕರಾಗಿ ಭಾರತದ ಗ್ರಾಂಡ್ ಮಾಸ್ಟರ್ ಶಿಫು ಇಂದ್ರಜಿತ್ (ಚೆನ್ನೈ) ಭಾಗವಹಿಸಿದ್ದರು. ಶಾಲಾ ತರಬೇತುದಾರರಾದ ನಾಟೋಳಂಡ ನಂಜುಂಡ ಅವರ ಮೇಲ್ವಿಚಾರಣೆಯಲ್ಲಿ, ವೇಣುಗೋಪಾಲ್ ಮತ್ತು ಸತೀಶ್ ಅವರ ಸಹಾಯದೊಂದಿಗೆ ನಡೆದ ಪರೀಕ್ಷೆಯಲ್ಲಿ, ಶಾಲಾ ವಿದ್ಯಾರ್ಥಿಗಳಾದ ದಿಶಾಂತ್ ಕೆ.ಆರ್., ಮಾನ್ವಿತ್ ಮುತ್ತಣ್ಣ ಎ.ಎಮ್. ಮತ್ತು ಶಿವಾನಿ ಎಮ್.ಬಿ. ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿದ್ದು, ಮುಂದಿನ ಸುತ್ತಿಗೆ ಅರ್ಹತೆಯನ್ನು ಪಡೆದಿದ್ದಾರೆ. ಇವರಿಗೆ ಶಾಲಾ ಮುಖ್ಯಸ್ಥರಾದ ಕವಿತಾ ಅವರು ಚಿನ್ನದ ಪದಕವನ್ನು ಹಸ್ತಾಂತರಿಸಿದರು.