ಮಡಿಕೇರಿ, ನ.30: ಪ್ರಸಕ್ತ (2018) ಸಾಲಿನ ಜಿಲ್ಲಾ ಮಟ್ಟದ ವಿಶ್ವ ವಿಶೇಷಚೇತನರ ದಿನಾಚರಣೆಯು ಡಿಸೆಂಬರ್ 3 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಓಂಕಾರೇಶ್ವರ ದೇವಾಸ್ಥಾನದ ಹತ್ತಿರ ಇರುವ ಓಂಕಾರ ಸದನದಲ್ಲಿ ನಡೆಯಲಿದೆ. ಜಿಲ್ಲೆಯ ಎಲ್ಲಾ ವಿಶೇಷಚೇತನರು ಈ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಡಿಕೇರಿ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ದೇವರಾಜು ಅವರು ತಿಳಿಸಿದ್ದಾರೆ.