ಗೋಣಿಕೊಪ್ಪ ವರದಿ, ಡಿ. 1: ತಮಿಳುನಾಡಿನ ಕಾರಕುಡಿ ಅಳಗಪ್ಪ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆಯುತ್ತಿರುವ ಅಂತರ್ ವಿ.ವಿ. ಮಹಿಳಾ ಹಾಕಿ ಟೂರ್ನಿಯಲ್ಲಿ ಮಂಗಳೂರು ವಿವಿ ತಂಡವು 4-1 ಗೋಲುಗಳಿಂದ ಭಾರತಿಯಾರ್ ವಿ.ವಿ. ತಂಡವನ್ನು ಸೋಲಿಸಿ ರೌಂಡ್ ರಾಬಿನ್ ಸುತ್ತಿಗೆ ಪ್ರವೇಶ ಪಡೆಯಿತು.

ತಂಡದ ಪರವಾಗಿ ನಿಶಾ 1. ಮಲ್ಲಮಾಡ ಲೀಲಾವತಿ 2. ಮರಿನಾ 1 ಗೋಲು ಹೊಡೆದರು.

ತರಬೇತು ದಾರರಾಗಿ ಮೂಕಚಂಡ ನಿರನ್ ನಾಚಪ್ಪ, ವ್ಯವಸ್ಥಾಪಕಿಯಾಗಿ ಕಂಬಿರಂಡ ರಾಖಿ ಪೂವಣ್ಣ ಕಾರ್ಯನಿರ್ವಹಿಸಿದರು.