ನಾಪೆÇೀಕ್ಲು, ಡಿ. 1: ಆರೋಗ್ಯವಂತ ಸಮಾಜವೇ ದೇಶದ ಸಂಪತ್ತು ಆದುದರಿಂದ ಎಲ್ಲರೂ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ನಾಪೆÇೀಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಹೇಳಿದರು. ನಾಪೆÇೀಕ್ಲು ಲಯನ್ಸ್ ಕ್ಲಬ್ ಮತ್ತು ಸ್ಥಳೀಯ ಅಂಕುರ್ ಪಬ್ಲಿಕ್ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಾನವರಿಗೆ ಹಣಕ್ಕಿಂತ ಆರೋಗ್ಯವೇ ಮುಖ್ಯ. ಗ್ರಾಮೀಣ ಪ್ರದೇಶದ ಜನರು ಆರೋಗ್ಯ ಸೇವೆಯಿಂದ ವಂಚಿತರಾಗುವದನ್ನು ತಪ್ಪಿಸಲು ನಮ್ಮ ಸಂಸ್ಥೆಯು ಬೆಂಗಳೂರಿನ ರೆಸೋನೆನ್ಸ್ ಸಂಸ್ಥೆಯ ವೈದ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಕುರ್ ಪಬ್ಲಿಕ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕೇಟೋಳಿರ ರತ್ನಾ ಚರ್ಮಣ್ಣ, ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳಾದ ಡಾ. ಕೋಟೇರ ಪಂಚಮ್ ತಿಮ್ಮಯ್ಯ, ಬೊಳ್ಳಂಡ ಶ್ಯಾಮ್ ಬಿದ್ದಪ್ಪ, ಕನ್ನಂಬಿರ ಸುದಿ ತಿಮ್ಮಯ್ಯ, ಅಪ್ಪಾರಂಡ ಸುಭಾಶ್ ತಿಮ್ಮಯ್ಯ, ಕುಂಡ್ಯೋಳಂಡ ಗಣೇಶ್ ಮುತ್ತಪ್ಪ,ಅಪ್ಪಾರಂಡ ಶಮ್ಮಿ, ತಜ್ಞ ವೈದ್ಯರಾದ ಡಾ. ಮುಂಡ್ಯೋಳಂಡ ಅಚ್ಚಯ್ಯ, ಡಾ. ಶರಣ್ಯ, ಡಾ. ದೀಪಿಕಾ, ಡಾ. ದುಶ್ಯಂತ್ ಇದ್ದರು.