ಕೂಡಿಗೆ, ಡಿ. 1: ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯ ಸಹಕಾರ ಸದಸ್ಯರಿಗೆ ಅನುಕೂಲವಾಗುವಂತೆ, ಗ್ರಾ.ಪಂ.ಗೊಂದು ಸಹಕಾರ ಸಂಘ ತರಬೇಕು ಎಂಬ ಸರಕಾರದ ನಿಯಮ ದಂತೆ ಶಿರಂಗಾಲದಲ್ಲಿ ಪ್ರಾರಂಭಿಸಿದ ಸಹಕಾರ ಸಂಘದ ಚುನಾವಣೆ ತಾ. 2 ರಂದು (ಇಂದು) ನಡೆಯಲ್ಲಿದೆ. ಇದರ ಆಕಾಂಕ್ಷಿಗಳಾಗಿ 35 ಅಭ್ಯಥಿಗಳು ನಾಮಪತ್ರಗಳನ್ನು ವಿವಿಧ ಸ್ಥಾನಗಳಿಗೆ ಸಲ್ಲಿಸಿರುತ್ತಾರೆ. ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ರಘು, ಹಾಗೂ ತೊರೆನೂರು ಸಹಕಾರ ಸಂಘ ಕಾರ್ಯದರ್ಶಿ ಜೀವನ ಕಾರ್ಯ ನಿರ್ವಹಿಸುತ್ತಿದ್ದಾರೆ.