ಶ್ರೀಮಂಗಲ, ಡಿ. 1: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಅದರಲ್ಲೂ ಕವಿಗಳಾಗಬೇಕಾದರೆ ಮೊದಲು ಹೆಸರಾಂತ ಕವಿಗಳ ಕವನಗಳನ್ನು ಓದುವ ಹಾಗೂ ಕೇಳುವ ಅಭಿರುಚಿಯನ್ನು ಮೈಗೂಡಿಸಿ ಕೊಳ್ಳಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇರ್ಪು ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಇರ್ಪು ಜಲಪಾತದೆದುರು ನಡೆದ ಬಹುಭಾಷಾ ಜಲಪಾತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದಅವರು ಕವನ ಸೃಷ್ಟಿಯಿಂದ ತಮ್ಮ ಭಾವನೆಯನ್ನು ವ್ಯಕ್ತಪಡಿಸುವದರೊಂದಿಗೆ ಶಬ್ದ ಭಂಡಾರದ ಬೆಳವಣಿಗೆ ಸಾಧ್ಯ. ಕನ್ನಡದಲ್ಲಿ ಮತ್ತಷ್ಟು ಹೆಚ್ಚು ಸಂಶೋಧನಾತ್ಮಕ ಕೆಲಸ ನಡೆಯಬೇಕಿದ್ದು, ಅದಕ್ಕೆ ಈ ರೀತಿಯ ಕವಿಗೋಷ್ಠಿಗಳು ಪೂರಕವಾಗಲಿ ಎಂದರು.
ಮುಖ್ಯ ಅತಿಥಿ ಸಹ ಅರಣ್ಯ ಸಂರಕ್ಷಣಾಧಿಕಾರಿದಯಾನಂದ್ ಮಾತನಾಡಿ ಕಾರ್ಯಕ್ರಮಕ್ಕೆ ಬಾರದಿದ್ದಿದ್ದರೆ ಅತ್ಯುತ್ತಮ ಕಾರ್ಯಕ್ರಮದಿಂದ ವಂಚಿತನಾಗುತ್ತಿದ್ದೆ. ಸಾಹಿತ್ಯ ಬೆಳವಣಿಗೆಯಿಂದ ಮನುಷ್ಯನ ಮಾನಸಿಕ ಬೆಳವಣಿಗೆಯೊಂದಿಗೆ ಉತ್ತಮ ಸಂಸ್ಕಾರವಿರುವ ಸಮಾಜದ ಅಭಿವೃದ್ಧಿ ಸಾಧ್ಯ. ಮುಂದಿನ ದಿನಗಳಲ್ಲಿ ಬಾಲಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗುವಂತಾಗಲಿ ಎಂದರು.
ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕ ರಾಜು ಮಾತನಾಡಿ ಇದೊಂದು ಶ್ಲಾಘನೀಯ ಕಾರ್ಯಕ್ರಮ ಸಣ್ಣ ತೊರೆಗಳು, ಜಲಪಾತಗಳು ಸೇರಿ ನದಿಯಾಗುವಂತೆ ಒಂದು ಸಂಸ್ಕøತಿಯ ಬೆಳವಣಿಗೆ ಎಲ್ಲಾ ಭಾಷೆ, ಕಲೆ ಹಾಗೂ ಸಾಹಿತ್ಯದ ಸಮ್ಮಿಲನದಿಂದ ಮಾತ್ರ ಸಾಧ್ಯ. ಯಾವದೇ ಒಂದು ಸಂಸ್ಕøತಿಯ ಭೌತಿಕ ಕುರುಹು ಅಳಿದರು ಅದರ ಕಲೆ ಸಂಸ್ಕøತಿ ನಿತ್ಯ ನಿರಂತರ ಪ್ರೋತ್ಸಾಹ ದೊರೆತಾಗ ಮಾತ್ರ ಸಂಸ್ಕøತಿಯ ಬೆಳವಣಿಗೆಯು ಸಾಧ್ಯವಾಗುತ್ತದೆ ಎಂದರು.
ಪೊನ್ನಂಪೇಟೆ ಜೆ.ಸಿ.ಐ ನಿಸರ್ಗ ಸಂಸ್ಥೆಯ ಅಧ್ಯಕ್ಷ ಮೂಡಗದ್ದೆ ವಿಕ್ರಂ ಮಾತನಾಡಿ ಯಾವದೇ ಜಾಗಕ್ಕೆ ಮತ್ತೆ ಮತ್ತೆ ಹೋದರು ಕವಿಗಳಿಗೆ ಹೊಸ ವಿಚಾರಗಳು ಮನದಲ್ಲಿ ಮೂಡಿ ಹೊಸ ಕವಿತೆಗಳು ಸೃಷ್ಟಿಯಾಗುತ್ತದೆ. ಹೊಸ ಕವನಗಳೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕವಿಗಳ ಹಾಗೂ ಅದಕ್ಕೆ ಅವಕಾಶ ಮಾಡಿಕೊಡುವ ಈ ರೀತಿಯ ಕಾರ್ಯಕ್ರಮಗಳ ವ್ಯವಸ್ಥೆ ಶ್ಲಾಘನೀಯ ಎಂದರು.
ಕಂದಾಯ ಅಧಿಕಾರಿ ದೇವಯ್ಯ ಮಾತನಾಡಿ ಇಂತಹ ಉತ್ತಮ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿ ಬಂದು ಸಾಹಿತ್ಯ, ಕಲೆ, ಸಂಸ್ಕøತಿಯ ಬೆಳವಣಿಗೆಗೆ ಪೂರಕವಾಗಲೆಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕ.ಸಾ.ಪ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಕವಿಗಳ ಹೃದಯದ ಭಾವನೆ ಅಕ್ಷರ ರೂಪದಲ್ಲಿ ಹೊರಬೀಳಲು ಈ ಕವಿಗೋಷ್ಠಿ ಪೂರಕವಾಗಿದೆ. ರಾಷ್ಟ್ರ ಭಾಷೆ ಹಿಂದಿಯಿಂದ ಪ್ರಾರಂಭವಾಗಿ ಸ್ಥಳೀಯ ಕೊಡವಭಾಷೆಯವರೆಗೆ ಎಲ್ಲಾ ಭಾಷೆಯ ಹಾಗೂ ಭಾಷಿಕರ ಮಿಳಿತ ಈ ಕವಿಗೋಷ್ಠಿಯಿಂದ ಸಾಧ್ಯವಾಗಿರುವದು ತೃಪ್ತಿ ತಂದಿದೆ ಎಂದರು.
ಬಾಲ ಪ್ರತಿಭೆ 4ನೇ ತರಗತಿಯ ವಿದ್ಯಾರ್ಥಿನಿ ಅಲ್ಫಿಯಾ ಮೆಹರ್ ವಾಚಿಸಿದ ಹಿಂದಿ ಕವನದೊಂದಿಗೆ ಆರಂಭವಾದ ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚು ಕವಿಗಳು ಹಿಂದಿ, ಕನ್ನಡ, ಕೊಡವ, ಅರೆಭಾಷೆ, ಸಂಸ್ಕøತ, ಮಲೆಯಾಳಂ ಅನುವಾದಿತ ಕವನಗಳನ್ನು ವಾಚಿಸಿದರು.
ಸಂಗೀತ ಕಲಾವಿದ ಟಿ.ಡಿ. ಮೋಹನ್ ಅವರ ಶುಶ್ರಾವ್ಯ ಗಾಯನ ಹಾಗೂ ಚಿತ್ರಕಾರ ಬಿ.ಆರ್ ಸತೀಷ್ರವರ ಹಾಡಿಗೆ ಸರಿಯಾದ ಚಿತ್ರರಚನೆ ನೆರೆದಿದ್ದವರಲ್ಲಿ ಬೆರಗು ಮೂಡಿಸಿತು.
ವೇದಿಕೆಯಲಿ ್ಲಕನ್ನಡ ಜಾಗೃತಿ ಸಮಿತಿ ನಿರ್ದೇಶಕಿ ಮುಲ್ಲೇಂಗಡ ರೇವತಿ ಪೂವಯ್ಯ, ಇರ್ಪು ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ರೀರ ಪಿ.ವಿಷ್ಣು, ಜಿಲ್ಲಾ ಕ.ಸಾ.ಪ ನಿರ್ದೇಶಕ ಬಾಲಕೃಷ್ಣ ರೈ, ಶ್ರೀಮಂಗಲ ಹೋಬಳಿ ಕ.ಸಾ.ಪ ಅಧ್ಯಕ್ಷ ಚೆÀಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿಗಳಾದ ಮಂಡಂಗಡ ಅಶೋಕ್, ಬುಟ್ಟಿಯಂಡ ಸುನಿತ ಗಣಪತಿ, ಮಹಿಳಾ ಪ್ರತಿನಿಧಿ ಉಳುವಂಗಡ ಕಾವೇರಿ ಉದಯ, ಕ.ಸಾ.ಪ ತಾಲೂಕು ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ನಿರ್ದೇಶಕ ಚೊಟ್ಟೆಯಾಂಡಮಾಡ ವಿಶ್ವನಾಥ್, ಇರ್ಪು ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಚೋಕಿರಾ ಹ್ಯಾರಿ, ನಿರ್ದೇಶಕಿ ಬೊಳ್ಳೇರ ಕುಸುಮ, ದೇವಸ್ಥಾನ ಪಾರುಪತ್ತೇದಾರ ಅಜ್ಜಮಾಡ ಅಣ್ಣಯ್ಯ, ಶ್ರೀಮಂಗಲ ಗ್ರಾ.ಪಂ. ಮಾಜಿ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಉಪಸ್ಥಿತರಿದ್ದರು.