ಮಡಿಕೇರಿ, ಡಿ. 1: ಎರಡು ವರ್ಷವನ್ನಷ್ಟೇ ಪೂರೈಸಿರುವ ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿ, ಇತ್ತೀಚೆಗೆ ರಾಮನಗರದ ಜಾನಪದ ಲೋಕದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಖಜಾಂಚಿ ಸಂಪತ್ ಕುಮಾರ್ ಹಾಗೂ ಉಪಾಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.

ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷ ತಿಮ್ಮೇಗೌಡ ಅವರು ಎಲ್ಲೆಡೆಯ ಜಾನಪದ ಕಲಾವಿದರ ದಾಖಲೆ ಒಳಗೊಂಡ ಹೊತ್ತಿಗೆ ತರುವ ಆಶಯ ವ್ಯಕ್ತಪಡಿಸಿದರು. ನಿಷ್ಕ್ರಿಯವಾಗಿರುವ ತಾಲೂಕು, ಜಿಲ್ಲಾ ಘಟಕಗಳಿದ್ದರೆ ಪದಾಧಿಕಾರಿಗಳ ಬದಲಾವಣೆ ಕೂಡಲೆ ಆಗಬೇಕೆಂದರು. ಜಾನಪದ ಕಲೆ, ಹಿನ್ನೆಲೆ, ಸಂಸ್ಕøತಿಯ ಬೆಳವಣಿಗೆ ತಮ್ಮ ಉದ್ದೇಶವಾಗಿದ್ದು, ಎಲ್ಲಾ ಘಟಕಗಳೂ ಈ ನಿಟ್ಟಿನಲ್ಲಿ ಶ್ರಮಿಸುವಂತೆ ಹೇಳಿದರು.