ಕೂಡಿಗೆ, ಡಿ. 1: ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಮೇಲಾಟಗಳ ಜಿಮ್ನಾಸಿಯಂ ವಿಭಾಗದಲ್ಲಿ ಕೂಡಿಗೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಎಂ.ಎನ್. ಮಧು ಸೂದನ್ ಮತ್ತು 800 ಮೀ. ಓಟದಲ್ಲಿ ಸಿ.ಎಂ. ಶೈಲಾ ದ್ವಿತೀಯ ಸ್ಥಾನಗಳಿಸಿದ್ದಾರೆ. ತ್ರಿಪುರ ಮತ್ತು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದಲ್ಲಿ ಇವರು ಪಾಲ್ಗೊಳ್ಳಲಿದ್ದಾರೆ. ಕ್ರೀಡಾ ಶಾಲಾ ತರಬೇತುದಾರರಾದ ಜಗನ್ನಾಥ್, ಅಂಥೋಣಿ ಡಿಸೋಜ ನಿಖಿಲಾ ಜೋಸೆಫ್ ತರಬೇತಿ ನೀಡಿದ್ದಾರೆ.