ಸೋಮವಾರಪೇಟೆ, ಡಿ. 1: ಇಲ್ಲಿನ ರೋಟರಿ ಕ್ಲಬ್ ಆಶ್ರಯದಲ್ಲಿ 3181 ರೋಟರಿ ಜಿಲ್ಲಾ “ಕಲಾ ಸಂಗಮ” ಸಾಂಸ್ಕøತಿಕ ಕಾರ್ಯಕ್ರಮ ತಾ. 2 ರಂದು (ಇಂದು) ಸ್ಥಳೀಯ ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ ನಡೆಯಲಿದೆ ಎಂದು ರೋಟರಿ ಅಧ್ಯಕ್ಷ ಪಿ.ಕೆ. ರವಿ ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ರಾಜ್ಯಪಾಲ ಪಿ. ರೋಹಿನಾಥ್ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ನಿಯೋಜಿತ ಅಧ್ಯಕ್ಷ ಜೋಸೆಫ್ ಮ್ಯಾಥ್ಯು, 2020-21ನೇ ಸಾಲಿನ ನಿಯೋಜಿತ ಅಧ್ಯಕ್ಷ ಎಂ. ರಘುನಾಥ್ ಭಟ್, ಜಿಲ್ಲಾ ಸಾಂಸ್ಕøತಿಕ ವಿಭಾಗದ ಅಧ್ಯಕ್ಷ ಮಹೇಶ್‍ಕುಮಾರ್ ನಾಲ್ವಡೆ, ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ ಭಾಗವಹಿಸಲಿದ್ದಾರೆ.