ಮಡಿಕೇರಿ, ಡಿ. 1: 2016-17ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (6-8) ಸಂಬಂಧ ಆಯ್ಕೆಯಾದ ಅಭ್ಯರ್ಥಿಗಳ ಮುಖ್ಯ ಆಯ್ಕೆಪಟ್ಟಿಯನ್ನು ತಾ. 23 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸಭೆಯಲ್ಲಿ ಎಲ್ಲಾ ಜಿಲ್ಲೆಯ ಉಪ ನಿರ್ದೇಶಕರಿಗೆ ವಿತರಿಸಿ ತಾ. 27 ರಿಂದ ಡಿಸೆಂಬರ್ 14 ರವರೆಗೆ ಕೌನ್ಸಿಲಿಂಗ್ ಮಾಡಿ ಸ್ಥಳ ನಿಯುಕ್ತಿಗೊಳಿಸಲು ಆದೇಶಿಸಿರುತ್ತಾರೆ.

ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ 17 ಆಂಗ್ಲ ಭಾಷಾ ಶಿಕ್ಷಕರು, 06 ಗಣಿತ/ ವಿಜ್ಞಾನ ಶಿಕ್ಷಕರು ಮತ್ತು 4 ಸಮಾಜ ವಿಜ್ಞಾನ ಶಿಕ್ಷಕರು ವಿಷಯಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಮುಖ್ಯ ಆಯ್ಕೆ ಪಟ್ಟಿಯನ್ನು ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಡಿಸೆಂಬರ್ 1 ರಂದು ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 2016-17ನೇ ಸಾಲಿನ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6-8) ಸ್ಥಳ ನಿಯುಕ್ತಿ ಮಾಡಲಾಗುತ್ತದೆ. ಆದ್ದರಿಂದ ಆಯ್ಕೆಗೊಂಡಿರುವ ಅಭ್ಯರ್ಥಿಗಳು ತಮ್ಮ ಮೂಲದಾಖಲೆಗಳೊಂದಿಗೆ (ಮೂಲ ಪ್ರಮಾಣ ಪತ್ರಗಳು ಹಾಗೂ 3 ಸೆಟ್ ಜೆರಾಕ್ಸ್ ದೃಡೀಕೃತ ಪ್ರತಿಗಳು) ಕೌನ್ಸಿಲಿಂಗ್‍ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೊ ತಿಳಿಸಿದ್ದಾರೆ.