ಗೋಣಿಕೊಪ್ಪ ವರದಿ, ಡಿ. 1: ಹಾಕಿ ಕೂರ್ಗ್ ವತಿಯಿಂದ ಪೆÇನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತಿ ್ತರುವ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಹಾಕಿ ಟೂರ್ನಿಯಲ್ಲಿ 6 ತಂಡಗಳು ಗೆಲುವು ದಾಖಲಿಸಿವೆ.

ಬಾಲಕರಲ್ಲಿ ಪ್ರಗತಿ, ಲಯನ್ಸ್, ಅಂಕೂರ್, ರಾಮಟ್ರಸ್ಟ್ ತಂಡವು, ಸೆಂಟ್ ಆನ್ಸ್, ಬಾಲಕಿಯರಲ್ಲಿ ಲಯನ್ಸ್ ಗೆಲುವು ದಾಖಲಿಸಿದವು.

ಬಾಲಕರ ವಿಭಾಗ

ಪ್ರಗತಿ ತಂಡವು ಕಾಲ್ಸ್ ವಿರುದ್ಧ 4-3 ಗೋಲುಗಳ ಶೂಟೌಟ್‍ನಲ್ಲಿ 4-3 ಗೋಲುಗಳ ರೋಚಕ ಗೆಲುವು ದಾಖಲಿಸಿತು. ಉಭಯ ತಂಡಗಳು ಪಂದ್ಯದ ಅವಧಿಯಲ್ಲಿ ತಲಾ ಒಂದೊಂದು ಗೋಲು ದಾಖಲಿಸಿ ದವು,. ಪ್ರಗತಿ ಪರ 11ರಲ್ಲಿ ಮಾಜ್, ಕಾಲ್ಸ್ ಪರ 14ನೇ ನಿಮಿಷದಲ್ಲಿ ಓಮ್ ಗಣಪತಿ ಗೋಲು ಹೊಡೆದರು. ಶೂಟೌಟ್‍ನಲ್ಲಿ ಪ್ರಗತಿ ಪರ ನೀತ್ ಯಶ್ವಂತ್, ಅಖಿಲ್, ರೋಹನ್, ಕಾಲ್ಸ್ ಪರ ಕರುಂಬಯ್ಯ, ಜೇಕಬ್ ಗೋಲು ಹೊಡೆದರು.

ಲಯನ್ಸ್ ತಂಡವು ಸೆಂಟ್ ಆಂಥೋನಿ ತಂಡವನನು 3-1 ಗೋಲುಗಳಿಂದ ಸೋಲಿಸಿತು. ಲಯನ್ಸ್ ಪರ 1 ಹಾಗೂ 15ರಲ್ಲಿ ವಚನ್, 10ರಲ್ಲಿ ಸೌರವ್, ಆಂಥೋನಿ ಪರ 25ರಲ್ಲಿ ದಿವಿನ್ ಗೋಲು ಬಾರಿಸಿದರು.

ಅಂಕೂರ್ ತಂಡ ರೂಟ್ಸ್ ತಂಡದ ವಿರುದ್ದ 3-1 ಗೋಲುಗಳಿಂದ ಜಯ ಸಾಧಿಸಿತು. ಅಂಕೂರ್ ಪರ 5 ಹಾಗೂ 15ನೇ ನಿಮಿಷಗಳಲ್ಲಿ ಪೂವಣ್ಣ, 23ರಲ್ಲಿ ವಚನ್, ರೂಟ್ರ್ಸ್ ಪರ 18ರಲ್ಲಿ ಮಿಥುನ್ ಗೋಲು ಹೊಡೆದರು.

ರಾಮಟ್ರಸ್ಟ್ ತಂಡವು ಪ್ರಗತಿ ತಂಡದ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಗೆಲುವು ಪಡೆಯಿತು. ರಾಮಟ್ರಸ್ಟ್ ಪರ 20 ಹಾಗೂ 25ನೇ ನಿಮಿಷಗಳಲ್ಲಿ ಇಶಾನ್ 2 ಗೋಲು ಹೊಡೆದರು. ಉಳಿದಂತೆ 6 ರಲ್ಲಿ ಮುತ್ತಣ್ಣ, 16ರಲ್ಲಿ ನಿರೂಪ್ ಗೋಲು ಹೊಡೆದರು.

ಸೆಂಟ್ ಆನ್ಸ್ ತಂಡವು ಲಯನ್ಸ್ ತಂಡವನ್ನು 4-0 ಗೋಲುಗಳ ಅಂತರದಲ್ಲಿ ಮಣಿಸಿತು. ಆನ್ಸ್ ಪರ 7, 10, 14ನೇ ನಿಮಿಷಗಳಲ್ಲಿ ಸುಬ್ರಮಣಿ 3 ಗೋಲು ಹೊಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. 20ನೇ ನಿಮಿಷದಲ್ಲಿ ಸಾತ್ವಿಕ್ 1 ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.

ಬಾಲಕಿಯರ ವಿಭಾಗ

ಲಯನ್ಸ್ ತಂಡವು ಬೋಯಿಕೇರಿ ಸರ್ಕಾರಿ ಶಾಲೆ ತಂಡವನ್ನು 3-0 ಗೋಲುಗಳಿಂದ ಮಣಿಸಿತು. ಲಯನ್ಸ್ ಪರವಾಗಿ 2 ಹಾಗೂ 19ನೇ ನಿಮಿಷ ಗಳಲ್ಲಿ ದೃಷ್ಠಿ 2 ಗೋಲು, 7ರಲ್ಲಿ ಪ್ರಾಪ್ತಿ 1 ಗೋಲು ಹೊಡೆದರು. -ಸುದ್ದಿಪುತ್ರ