ಮಡಿಕೇರಿ, ಡಿ. 2: ತಾ. 3 ರಂದು (ಇಂದು) ಕಾರ್ತಿಕ ಸೋಮವಾರ ಶ್ರೀ ಓಂಕಾರೇಶ್ವರ ದೇಗುಲದಲ್ಲಿ ತೆಪ್ಪೋತ್ಸವ ಮತ್ತು ಪಲ್ಲಕ್ಕಿ ಉತ್ಸವಗಳು ನಡೆಯಲಿದೆ. ಸಂಜೆ 6.30 ಗಂಟೆಯಿಂದ ತೆಪ್ಪೋತ್ಸವವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕುಟುಂಬದ ಪರವಾಗಿ ನಡೆಸಲಿದ್ದಾರೆ ಎಂದು ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.