ಶನಿವಾರಸಂತೆ, ಡಿ. 3: ಪಟ್ಟಣದ ಶ್ರೀ ಬೀರಲಿಂಗೇಶ್ವರ, ಶ್ರೀ ಪ್ರಬಲಭೈರವಿ ಹಾಗೂ ಶ್ರೀ ಪರಿಹಾರ ದೇವರುಗಳ ಜೀರ್ಣೋದ್ಧಾರ ಮಹೋತ್ಸವ ತಾ. 5 ರಿಂದ 9ರ ವರೆಗೆ ನಡೆಯಲಿದೆ.
ತಾ. 5 ರಂದು ದೇವರುಗಳ ಪೂಜಾ ಕಾರ್ಯಕ್ರಮಗಳು ಆರಂಭವಾಗುತ್ತವೆ. ಬೆಳಿಗ್ಗೆ 9.30 ಗಂಟೆಗೆ ಶ್ರೀ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಸಂಕಲ್ಪ, ಪ್ರಾರ್ಥನೆ ಹಾಗೂ ಮಹಾಮಂಗಳಾರತಿ, 10 ಗಂಟೆಗೆ ಬಿದರೂರಿನ ಉರೊಡೆಯ, ಬ್ರಹ್ಮದೇವರು ಹಾಗೂ ಬಸವೇಶ್ವರ ದೇವಾಲಯ, 10.30ಕ್ಕೆ ಹೆಮ್ಮನೆಯ ಮಾರಮ್ಮದೇವಿ ಹಾಗೂ ಬಸವೇಶ್ವರ ದೇವಾಲಯ, 11 ಗಂಟೆಗೆ ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಾಲಯ ಹಾಗೂ ಚೌಡಮ್ಮನ ಬನÀ, 11.30ಕ್ಕೆ ಶ್ರೀ ರಾಮಮಂದಿರ, 12 ಗಂಟೆಗೆ ಜಾಮೀಯ ಮಸೀದಿಯಲ್ಲಿ ಪೂಜೆ, ಪ್ರಾರ್ಥನೆ ನಡೆಯಲಿದೆ.
1.30ಕ್ಕೆ ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲಭೈರವಿ ಸನ್ನಿಧಿಯಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಎಲ್ಲಾ ಪರಿವಾರ ದೇವರ ಪೂಜಾ ಕಾರ್ಯಕ್ರಮಕ್ಕೆ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ.
ತಾ. 6 ರಂದು ಸಂಜೆ 6 ಗಂಟೆಗೆ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. 8.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ತಾ. 8 ರಂದು ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲಭೈರವಿ ಸನ್ನಿಧಿಯಲ್ಲಿ ‘ಅಘೋರ ಹೋಮ’ ಹಾಗೂ ’ಬೂದಾ ಉಚ್ಛಾಟನೆ’ ಕಾರ್ಯಕ್ರಮವಿದೆ.
ತಾ. 9 ರಂದು ಬೆಳಿಗ್ಗೆ 9 ಗಂಟೆಗೆ ಸ್ಥಳ ಶುದ್ಧಿ ಹಾಗೂ ಗ್ರಾಮ ಶಾಂತಿ, 11.30 ರಿಂದ ಕೇರಳದ ಪ್ರಖ್ಯಾತ ಶಾಜಿ ವಯನಾಡ್ ಅವರಿಂದ ಚಂಡೆ ವಾದ್ಯ ವೃಂದದೊಂದಿಗೆ ಮೆರವಣಿಗೆಯಲ್ಲಿ ಗ್ರಾಮಕ್ಕೆ ತೀರ್ಥ ಪ್ರೋಕ್ಷಣೆ, ಮಧ್ಯಾಹ್ನ 1.30ಕ್ಕೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಈ ಎಲ್ಲಾ ಪೂಜಾ ಕಾರ್ಯಕ್ರಮಗಳ ನೇತೃತ್ವವನ್ನು ಮಂಗಳೂರಿನ ಕದ್ರಿಯ ಶ್ರೀರಂಗ ಐತಾಳ್ ವಹಿಸಲಿದ್ದಾರೆ ಎಂದು ಶ್ರೀ ಬೀರಲಿಂಗೇಶ್ವರ, ಶ್ರೀ ಪ್ರಬಲಭೈರವಿ ಹಾಗೂ ಶ್ರೀ ಪರಿಹಾರ ದೇವರುಗಳ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.