ಒಂದು ಊರಿನ ಅಭಿವೃದ್ಧಿಯನ್ನು ನೋಡಬೇಕಾದರೆ ಆ ಊರಿನ ದೇವಾಲಯಗಳನ್ನು ನೋಡಬೇಕು ಇಲ್ಲವೇ ಶಾಲೆಗಳನ್ನು ನೊಡಬೇಕು ಎನ್ನುವದು ಹಿರಿಯರ ಮಾತು.
ಹಳೆ ವಿದ್ಯಾರ್ಥಿಗಳ ಸಂಘ ಹಳೆ ವಿದ್ಯಾರ್ಥಿಗಳು ಸೇರಿ ತಮ್ಮ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕೆಂದು ಯೋಚಿಸಿ ಕೈಗೊಂಡ ಕಾರ್ಯಕ್ರಮದಂತೆ ಶಾಲೆಗೆ ಸುಮಾರು 35 ಸಾವಿರ ಮೊತ್ತದ ಪುಟ್ಟ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್, ಡೆಸ್ಕ್ ನೀಡಿದ್ದಾರೆ. ಮಡಿಕೇರಿಯಲ್ಲಿ ನೂರಾರು ವರ್ಷಗಳ ಇತಿಹಾಸ ಇರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಈ ಹಿಂದೆ ಕೊಡಗಿನ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳ ಪಾಲಿಗೆ ಜ್ಞಾನ ದೇಗುಲವೇ ಆಗಿತ್ತು.
ಕಳೆದ ಹಲವು ವರ್ಷಗಳಿಂದ ಇದೇ ಶಾಲೆಯಲ್ಲಿ ಕಲಿತು ಉದ್ಯೋಗದ ನಿಮಿತ್ತ ಬೇರೆ ಬೇರೆ ಊರಿನಲ್ಲಿ ವಾಸಿಸುವವರು ಯೋಚಿಸಿದ್ದು ಒಂದೇ. ನಾವು ಕಲಿತ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವದು. ಇಂದಿನ ವೇಗದ ಜೀವನದಲ್ಲಿ ತಮ್ಮ ತಮ್ಮ ಕಾರ್ಯಗಳನ್ನೇ ಮಾಡಿ ಕೊಂಡಿರುವದು ಕಷ್ಟವಾದರೂ ಸುಮಾರು 35ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಮನಸ್ಸು ಮಾಡಿ ಶಾಲೆಗೆ ಅನೇಕ ಕೊಡುಗೆ ನೀಡಲು ಮುಂದಾಗಿದ್ದಾರೆ. ಯಾವದೋ ಒಂದು ಉದ್ಯೋಗದಲ್ಲಿದ್ದುಕೊಂಡು ತಾವು ತಮ್ಮ ಸಂಸಾರ ಎನ್ನುವ ಜಂಜಾಟದಲ್ಲಿಯೇ ಇರುವವರ ನಡುವೆ ನಾವು ಇಂತಹ ಹಳೇ ವಿದ್ಯಾರ್ಥಿಗಳನ್ನು ನೆನೆಸಬೇಕಾಗಿದೆ.
ಈಗಾಗಲೇ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್, ಡೆಸ್ಕ್ ನೀಡಿರುವ ಹಳೇ ವಿದ್ಯಾರ್ಥಿಗಳ ಶಾಲಾ ಪ್ರೇಮಕ್ಕೆ ಸಾಕ್ಷಿಯಾಗಿದೆ. ಕನ್ನಡ ಶಾಲೆಗಳನ್ನು ಮುಂದಿನ ದಿನಗಳಲ್ಲಿ ಉಳಿಸುವ ಪ್ರಯತ್ನ ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ಶಾಲೆಯ ಏಳಿಗೆಗಾಗಿ ಕೈ ಜೋಡಿಸುವಂತೆ ಮಾನವಿ ಮಾಡಿದ್ದಾರೆ. ಶಾಲೆಗೆ ಕೊಡುಗೆಯಾಗಿ ನೀಡಿದ ಬೆಂಚ್ ಡೆಸ್ಕ್ ಪೀಠೋಪಕರಣಗಳನ್ನು ಶಾಲೆಗೆ ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಕುಶಾಲಿನಿ ಸದಸ್ಯರುಗಳಾದ ಪೀಟರ್, ದಯಾನಂದ, ಲೋಹಿತ್, ರಾಜೇಶ್, ಮಲ್ಲಿಕಾರ್ಜುನ್, ಪವಿತ್ರ, ಭಾಗೀರಥಿ, ಶ್ವೇತ, ಶಾಲಾ ಶಿಕ್ಷಕರು ಹಾಜರಿದ್ದರು.