ಮಡಿಕೇರಿ, ಡಿ. 2: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕೊಡವ ಸಮಾಜ ಮಾದಾಪುರದ ಜಂಟಿ ಆಶ್ರಯದಲ್ಲಿ ಏಳ್‍ನಾಡ್‍ರ ಸಾಂಸ್ಕøತಿಕ ಸಂಗಮ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಗರದ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ತಾ. 29 ರಂದು ಮಾದಾಪುರದಲ್ಲಿ ಕೊಡವ ಸಮಾಜ ಸಭಾಂಗಣದಲ್ಲಿ ಏಳ್‍ನಾಡ್‍ರ ಸಾಂಸ್ಕøತಿಕ ಸಂಗಮ ಕಾರ್ಯಕ್ರಮವನ್ನು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಗೆ ಮಾದಾಪುರದ ಪಟ್ಟಣದಲ್ಲಿ ಮೆರವಣಿಗೆ, ಏಳ್ ನಾಡ್ ಗ್ರಾಮಕ್ಕೆ ಸೇರಿದ ಏಳು ಗ್ರಾಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವಂತೆ ಹಾಗೂ ಪ್ರಕೃತಿ ವಿಕೋಪದ ಸಂದರ್ಭ ಸ್ವಯಂ ಸೇವಕರಾಗಿ ಕೆಲಸ ಮಾಡಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರನ್ನು ಸನ್ಮಾನಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಏಳ್‍ನಾಡ್‍ರ ಏಳು ಸಾಂಸ್ಕøತಿಕ ನೃತ್ಯ ತಂಡಗಳು ಭಾಗವಹಿಸಿ ಸಾಂಸ್ಕøತಿಕ ಪ್ರದರ್ಶನ ನಡೆಯಲಿದೆ. ಅಕಾಡೆಮಿಯ ತ್ರೈಮಾಸಿಕ ಸಂಚಿಕೆಯಾದ ಪೊಂಗುರಿ (ವಿಶೇಷ ಪುತ್ತರಿ ಸಂಚಿಕೆ) ಹಾಗೂ ಉಳುವಂಗಡ ಕಾವೇರಿ ಉದಯ ಅವರು ಬರೆದಿರುವ ‘ಭೂಲೋಕತ್‍ರ ಜನ್ಮ’, ಲಲಿತಾ ಕಾರ್ಯಪ್ಪ ಅವರು ಬರೆದಿರುವ ‘ಅಂಜಿ ಕಥೆರ ಗೂಡ್’ ಪುಸ್ತಕ ಬಿಡುಗಡೆಗೊಳ್ಳಲಿದೆ.

ಸಭೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ಆಪಟ್ಟಿರ ಎಸ್. ಟಾಟು ಮೊಣ್ಣಪ್ಪ, ತೋರೇರ ಎಂ. ಮುದ್ದಯ್ಯ, ಸುಳ್ಳಿಮಾಡ ಭಾವನಿ ಕಾವೇರಪ್ಪ, ಅಜ್ಜಮಾಡ ಪಿ. ಕುಶಾಲಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕುಡಿಯರ ಶಾರದ, ಹಂಚೆಟ್ಟಿರ ಮನು ಮುದ್ದಪ್ಪ, ನಾಳಿಯಮ್ಮಂಡ ಕೆ. ಉಮೇಶ್, ಬೊಳ್ಳಜಿರ ಬಿ. ಅಯ್ಯಪ್ಪ, ಮಾದಾಪುರ ಕೊಡವ ಸಮಾಜದ ಕಾರ್ಯದರ್ಶಿ ನಾಗಂಡ ಸಚಿನ್ ಕಾಳಪ್ಪ, ಏಳ್‍ನಾಡ್ ಗ್ರಾಮದ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.