ಗೋಣಿಕೊಪ್ಪ ವರದಿ, ಡಿ. 2: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ 29 ಕ್ರೀಡಾಪಟುಗಳು ಕರಾಟೆಯಲ್ಲಿ 46 ಪದಕ ಪಡೆದು ಸಾಧನೆ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆದ 17ನೇ ರಾಷ್ಟ್ರಮಟ್ಟದ ಒಕಿನೋವ ಕರಾಟೆ ಶೋರಿನ್ ಕೈ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿ 10 ಚಿನ್ನ, 10 ಬೆಳ್ಳಿ ಹಾಗೂ 26 ಕಂಚಿನ ಪದಕ ಗಳಿಸಿದರು.

ರಿಶಾ ನಾಣಯ್ಯ 2 ಚಿನ್ನ, ಉತ್ತಪ್ಪ, ಲಿತೇಶ್, ರಿವಿನ್, ರಂಜಿತ್, ಗಗನ್ ದೀಪ್‍ಆರಾಧ್ಯ, ಚಿಣ್ಣಪ್ಪ, ಪೂಜಾ ಹಾಗೂ ಮೋನಿಕ ತಲಾ ಒಂದೊಂದು ಚಿನ್ನದ ಪದಕ ಪಡೆದಿದ್ದಾರೆ.