ವೀರಾಜಪೇಟೆ, ಡಿ.3: ದಕ್ಷಿಣ ಕೊಡಗಿನ ವಿವಿಧ ಕಾಫಿ ತೋಟಗಳಲ್ಲಿ ಮಾವಿನ ಮರ, ಕಾಫಿಗಿಡ, ಕರಿಮೆಣಸು ಗಿಡಗಳ ಎಲೆಗಳನ್ನು ಕೊರೆದು ಫಸಲಿಗೆ ಧಕ್ಕೆ ತರುತ್ತಿರುವ ಸೈನಿಕ ಹುಳುಗಳ ಬಾಧೆ ಕಂಡು ಬಂದಿದೆ ಎಂದು ತಾಲೂಕಿನ ಎರಡನೇ ರುದ್ರಗುಪ್ಪೆ ಗ್ರಾಮದ ಕಾಫಿ ಬೆಳೆಗಾರ ಮೂಡಗದ್ದೆ ರಾಮಕೃಷ್ಣ ಅವರು ಇಲ್ಲಿನ ಗಾಂಧಿನಗರದಲ್ಲಿರುವ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೈನಿಕ ಹುಳುಗಳು ಎಲೆ ಸಮೇತ ಮನವಿ ನೀಡಿದ್ದಾರೆ.

ಸೈನಿಕ ಹುಳುಗಳ ಬಾಧೆ ಮೊದಲು ಸೋಮವಾರಪೇಟೆ, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಗಳಲ್ಲಿ ಕಂಡುಬಂದಿದ್ದು ಈಗ ಇದು ದಕ್ಷಿಣ ಕೊಡಗಿಗೂ ಹಬ್ಬಿದೆ. ರುದ್ರಗುಪ್ಪೆಯ ರಾಮಕೃಷ್ಣ ಅವರ ತೋಟದಲ್ಲಿ ಏಳು ದಿನಗಳ ಹಿಂದೆ ಈ ಸೈನಿಕ ಹುಳುಗಳ ಬಾಧೆ ಪತ್ತೆಯಾಗಿದ್ದು ಹುಳುಗಳ ಬಾಧೆಯಿಂದ ತೋಟದಲ್ಲಿದ್ದ ಒಂದು ಮಾವಿನ ಮರ ಎಲೆಗಳಿಲ್ಲದೆ ಬರಡಾಗಿದೆ. ಕೆಲವು ಕಾಫಿಗಿಡಗಳು ಎಲೆಗಳು ಪೂರ್ಣವಾಗಿ ಉದುರಿವೆ. ಇದರಿಂದಾಗಿ ಕಾಫಿ ಫಸಲು ಕುಂಠಿತಗೊಳ್ಳುವ ಸಾಧ್ಯತೆಯೇ ಅಧಿಕವಾಗಿದೆ. ಕಾಫಿ ಗಿಡದ ಪಕ್ಕದಲ್ಲಿರುವ ಕರಿ ಮೆಣಸು ಬಳ್ಳಿಗೂ ಹಬ್ಬಿರುವ ಹುಳುಗಳ ಬಾಧೆಯನ್ನು ನಿಯಂತ್ರಿಸದಿದ್ದರೆ ಬೆಳೆಗಾರರು ನಿರ್ಧಿಷ್ಟ ಪ್ರಮಾಣದ ಫಸಲು ತೆಗೆಯಲು ಸಾಧ್ಯವಾಗುವದಿಲ್ಲ ಎಂದು ರಾಮಕೃಷ್ಣ ತಿಳಿಸಿದ್ದಾರೆ.

ಹುಳುಗಳಿಂದ ಬಾಧೆಗೊಳ ಗಾಗಿರುವ ಮರ, ಗಿಡಗಳು, ಬಳ್ಳಿ ಗಳಿಗೆ ಔಷಧಿಯನ್ನು ಸಿಂಪಡಿಸ ಲಾಗಿರುವದರಿಂದ ಕಾಫಿ ಗಿಡ ರೋಗದಿಂದ ನಿಯಂತ್ರಣದಲ್ಲಿದೆ ಈ ಕೀಟಗಳ ಬಾಧೆ ದಕ್ಷಿಣ ಕೊಡಗಿನಾ ದ್ಯಂತ ಹಬ್ಬಿರುವ ಸಾಧ್ಯತೆ ಇದೆ ಈಗಾಗಲೇ ಸೈನಿಕ ಹುಳುವಿನ ಬಾಧೆ ಯಿಂದ ರೂ 15000ಕ್ಕೂ ಮೇಲ್ಪಟ್ಟು ನಷ್ಟ ಉಂಟಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.