ಗೋಣಿಕೊಪ್ಪಲು, ಡಿ. 2: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನ ಪೋಷಕ ಹಾಗೂ ಬೋಧಕರ ಸಭೆ ನಡೆಯಿತು. ಈ ಸಂದರ್ಭ ಪೋಷಕರ ಪರವಾಗಿ ಹೆಚ್.ಆರ್. ಜಯಣ್ಣ ಮಾತನಾಡಿ, ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಶೇ. 35 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಂದ ಶೇ. 95 ಕ್ಕಿಂತಲೂ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪಠ್ಯದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆ ಯಲ್ಲಿಯೂ ವಿದ್ಯಾರ್ಥಿಗಳು ಮುಂದಿದ್ದಾರೆ. ಕಾವೇರಿ ಕಾಲೇಜಿನ ಎಲ್ಲಾ ಅಧ್ಯಾಪಕರೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವದೇ ಇದಕ್ಕೆ ಕಾರಣ” ಎಂದರು. ಪೋಷಕರಾದ ಹೆಚ್.ಎ.ಗೀತ ಹಾಗೂ ಹೇಮಲತಾ ಮಾತನಾಡಿ, ಕೊಡಗಿನ ಪ್ರತಿಷ್ಠಿತ ಕಾಲೇಜಾದ ಕಾವೇರಿ ಕಾಲೇಜಿನಲ್ಲಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ಓದುವ ಮಕ್ಕಳಿಗೆ ಮೊಬೈಲ್ ಕೊಡಿಸದಿರುವದೇ ಉತ್ತಮ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, “ಪೋಷಕರು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಓದಲು ಬೇಕಾದ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಿಕೊಡಬೇಕು. ಪರೀಕ್ಷಾ ಸಮಯದಲ್ಲಿ ಮೊಬೈಲ್‍ನಿಂದ ವಿದ್ಯಾರ್ಥಿಗಳು ಆದಷ್ಟು ದೂರವಿರು ವಂತೆ ನೋಡಿಕೊಳ್ಳಬೇಕು. ತಿಂಗಳಿಗೊಮ್ಮೆಯಾದರೂ ಪೋಷಕರು ಕಾಲೇಜಿಗೆ ಬಂದು ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವದು ಉತ್ತಮ ಎಂದರು. ಈ ಸಂದರ್ಭ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಎಸ್.ಆರ್. ತಿರುಮಲಯ್ಯ, ಕಾರ್ಯ ಕ್ರಮ ಸಂಚಾಲಕರಾದ ಜಸಿಂತ, ಸಬ್ನ ಸೋಮಯ್ಯ, ಕುಶಾಲಪ್ಪ ಹಾಜರಿದ್ದರು. ಚೇತನ್ ಚಿಣ್ಣಪ್ಪ ಕಾಲೇಜಿನ ಬಗ್ಗೆ ಪಿ.ಪಿ.ಟಿ. ಪ್ರದರ್ಶನ ಮಾಡಿದರು.