ಮಡಿಕೇರಿ, ಡಿ. 2: ಇಲ್ಲಿನ ಐ.ಟಿ.ಐ. ಹಿಂಭಾಗದಲ್ಲಿರುವ ಕಿಡ್ಸ್ ಪ್ಯಾರಡೈಸ್ ಶಾಲೆಯಲ್ಲಿ ಪುಟಾಣಿ ಸಂಭ್ರಮ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ಮಹೇಶ್ ಜೈನಿ ಹಾಗೂ ನಗರಸಭಾ ಸದಸ್ಯ ಪೀಟರ್ ಆಗಮಿಸಿದ್ದರು.

ಪುಟಾಣಿ ಸಂಭ್ರಮ ಕಾರ್ಯಕ್ರಮದಲ್ಲಿ ಛದ್ಮವೇಷ ಸ್ಪರ್ಧೆ ಇತರ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.

ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷೆ ಬಿ.ಇ. ವಸಂತಿ ಉಪಸ್ಥಿತರಿದ್ದರು. ಮಕ್ಕಳ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭಗೊಂಡಿತು.

ಮುಖ್ಯೋಪಾಧ್ಯಾಯಿನಿ ಬಿಂದು ಸ್ವಾಗತಿಸಿದರು. ರಜತ್‍ರಾಜ್‍ರಿಂದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಚಾಲಕ ಹರೀಶ್ ಸರಳಾಯ ಸ್ವಾಗತಿಸಿ, ವಂದಿಸಿದರು.