ಮೂರ್ನಾಡು, ಡಿ. 2: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಜ್ಯ, ವಿಭಾಗೀಯ ಮತ್ತು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.

ಮೂರ್ನಾಡು ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಎಂ. ಮೊಹಮ್ಮದ್ ರಾಶಿಕ್ ಮತ್ತು ಕೆ.ಎ. ಶಾಹಿದ್ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆಯುವ ರಾಜ್ಯ ಮಟ್ಟದ ಅಂತರ ಪ್ರೌಢಶಾಲೆಯ ಟೇಬಲ್ ಟೆನ್ನಿಸ್ ಟೂರ್ನಮೆಂಟ್‍ನಲ್ಲಿ ಪ್ರತಿನಿಧಿಸಲಿದ್ದಾರೆ.

ಪದವಿ ಪೂರ್ವ ಕಾಲೇಜಿನ ವಿಭಾಗದ ಎ.ಎಸ್. ತೇಜಸ್ ಮತ್ತು ಹೆಚ್.ಆರ್. ಪುನೀತ್ ಟೇಬಲ್ ಟೆನ್ನಿಸ್ ಟೂರ್ನಮೆಂಟ್, ಹಾಕಿ ಪಂದ್ಯಾಟದಲ್ಲಿ ಬೆಳ್ಯಪ್ಪ, ವಾಲಿಬಾಲ್ ಪಂದ್ಯಾಟದಲ್ಲಿ ಸುಹೇಬ್ ಮತ್ತು ಸಾನೀದ್, ಭಾರದ ಕಲ್ಲು ಎಸೆತದಲ್ಲಿ ಗೀತಾ ರಾಜ್ಯಮಟ್ಟವನ್ನು ಪ್ರತಿನಿಧಿಸಲಿ ದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲಾದ ಜಿಲ್ಲಾ ಮಟ್ಟದ ಸಾಂಸ್ಕøತಿಕ ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಎಲ್.ಆರ್. ಮನು, ಸಿ.ಪಿ. ದೀಪ್ತಿ, ಕೆ.ಜಿ. ದೃಷ್ಟಿ ಮತ್ತು ಪಿ.ಪಿ. ಶ್ರೀರಕ್ಷಾ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪದವಿ ವಿಭಾಗದ ಬಿ.ಕಾಂ. ವಿದ್ಯಾರ್ಥಿಗಳಾದ ಭವನ್, ಪ್ರಸಾದ್ ಮತ್ತು ಅಯ್ಯಣ್ಣ ಅಂತರ ವಿಶ್ವ ವಿದ್ಯಾನಿಲಯ ಮಟ್ಟದ ಹಾಕಿ ಪಂದ್ಯಾ ಟದಲ್ಲಿ ಮಂಗಳೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.