ಮಡಿಕೇರಿ, ಡಿ. 3 : ಜ್ಞಾನವೇ ಶಕ್ತಿ ಎಂಬದನ್ನು ಪ್ರತಿಯೊಬ್ಬರು ತಿಳಿದುಕೊಂಡರೆ ಯಶಸ್ಸು ಸಾಧಿಸಲು ಸುಲಭ ಎಂದು ನೂತನವಾಗಿ ನ್ಯಾಯಾಧೀಶರಾಗಿ ಆಯ್ಕೆಗೊಂಡಿರುವ ಹೆಚ್.ಆರ್. ಸಚಿನ್ ಅಭಿಪ್ರಾಯ ಪಟ್ಟರು.

ನಗರದ ಜಿಲ್ಲಾ ನ್ಯಾಯಾಲಯ ದಲ್ಲಿ ನಡೆದ ವಕೀಲರ ದಿನಾಚರಣೆ ಸಂದರ್ಭ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಿರಂತರ ಕಲಿಕೆ ಹಾಗೂ ಅಧ್ಯಯನದಿಂದ ನ್ಯಾಯಾಧೀಶರಾಗಿ ಆಯ್ಕೆಯಾಗಲು ಸಹಕಾರಿಯಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು ಭಾರತದ ಪ್ರಥಮ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಅವರ ಹುಟ್ಟುಹಬ್ಬವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ವಕೀಲರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಗೈದಿರುವದು ಹೆಮ್ಮೆಯ ವಿಚಾರವಾಗಿದೆ. ವಕೀಲರು ಪ್ರಾಮಾಣಿಕತೆ, ಪಾರದರ್ಶಕತೆ, ಶ್ರದ್ಧೆಯನ್ನು ಮೈಗೂಡಿಸಿಕೊಂಡರೆ ತಮ್ಮ ವೃತ್ತಿಯಲ್ಲಿ ಯಶಸ್ಸುಗಳಿ¸ Àಬಹುದು ಎಂದು ಅವರು ನುಡಿದರ ಲ್ಲದೆ, ವಕೀಲರು ಸಮಾಜದ ಸುಧಾರಕ ರಾಗಬೇಕು ಎಂದರು.

ಪರಿಶ್ರಮವಿಲ್ಲದೆ ವಕೀಲ ವೃತ್ತಿಯಲ್ಲಿ ಸುಲಭವಾಗಿ ಜಯ ಸಾಧಿಸಲಾಗುವದಿಲ.್ಲ ವಕೀಲರು ಮೌಲ್ಯಾಧಾರಿತ ವೃತ್ತಿ ಪರತೆಯಿಂದ ಕಾರ್ಯನಿರ್ವಹಿಸಿ ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ನ್ಯಾಯಾಲಯದ ಗೌರವಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಕವನ್ ಅವರು ಮಾತನಾಡಿ ಬಾಬು ರಾಜೇಂದ್ರ ಪ್ರಸಾದ್ ಅವರಂತೆ ವಕೀಲರು ರಾಷ್ಟ್ರ ಕಟ್ಟುವಂತಹ ಕೆಲಸಕ್ಕೆ ಮುಂದಾಗ ಬೇಕು. ಹಾಗೂ ಸಮಾಜ ಸುಧಾರಣೆಯನ್ನು ಮಾಡಬೇಕು ಎಂದು ಕರೆ ನೀಡಿದರು.

ಹಿರಿಯ ವಕೀಲ ಕೃಷ್ಣಭಟ್ ಅವರು ಮಾತನಾಡಿ, ಎಚ್.ಆರ್. ಸಚಿನ್ ಅವರು ನ್ಯಾಯಾಧೀಶರಾಗಿ ಸಮಾಜಕ್ಕೆ ಹೆಚ್ಚಿನ ನ್ಯಾಯ ದೊರಕಿಸಿಕೊಡುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆ ಕಳೆದುಕೊಂಡು ಸಂತ್ರಸ್ತರಾದ ಕುಟುಂಬದವರಿಗೆ ಮಡಿಕೇರಿ ವಕೀಲರ ಸಂಘದ ವತಿಯಿಂದ ಸಹಾಯ ಧನದ ಚೆಕ್ ವಿತರಿಸಲಾಯಿತು.

ಹಿರಿಯ ವಕೀಲರಾದ ದಿವಂಗತ ಕೆ.ಪಿ. ಪೊನ್ನಪ್ಪ ಅವರ ಸ್ಮರಣಾರ್ಥ ಅವರ ಪತ್ನಿ ವಕೀಲರಾದ ಸೌಭಾಗ್ಯ ಪೊನ್ನಪ್ಪ ಅವರು ಮಡಿಕೇರಿ ವಕೀಲರ ಸಂಘಕ್ಕೆ ರೂ. ಮೂರು ಲಕ್ಷ ದೇಣಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಕೀಲರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು ಹಾಗೂ ವಕೀಲರ ಸಂಘದಿಂದ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಿಸಲಾಯಿತು. ಐವತ್ತು ವರ್ಷ ವಕೀಲ ವೃತ್ತಿ ಪೂರೈಸಿದ ಹಿರಿಯ ವಕೀಲರಾದ ಪಿ.ಎಂ. ಝಖಾರಿಯಾ ಮತ್ತು ಹಿರಿಯ ವಕೀಲರಾದ ಸೌಭಾಗ್ಯ ಪೊನ್ನಪ್ಪ ಅವರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು. ಪ್ರೀತಮ್, ಕಾರ್ಯದರ್ಶಿಗಳಾದ ಡಿ.ಜಿ. ಕಿಶೋರ್, ಖಜಾಂಚಿ ಬಿ.ಸಿ. ದೇವಿಪ್ರಸಾದ್, ವಕೀಲರು ಇತರರು ಇದ್ದರು.