ಗೋಣಿಕೊಪ್ಪ ವರದಿ, ಡಿ. 3 : ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್, ಕರುಂಬಯ್ಯಾಸ್ ಅಕಾಡೆಮಿ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ತಾ. 10 ರಿಂದ ಇನ್ವಿಟೇಷನ್ ಮಾಸ್ಟರ್ಸ್ ಹಾಕಿ ಕಪ್ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ.
17 ವರ್ಷದೊಳಗಿನ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಆಹ್ವಾನಿತ ತಂಡಗಳು ಈ ಟೂರ್ನಿಯಲ್ಲಿ ಸೆಣೆಸಾಟ ನಡೆಸಲಿವೆ ಎಂದು ಕಾಲ್ಸ್ ಪ್ರಾಂಶುಪಾಲ ಬಾಚೇಟೀರ ಗೌರಮ್ಮ ನಂಜಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
3ನೇ ವರ್ಷದ ಟೂರ್ನಿಯಾಗಿದ್ದು, ಕರುಂಬಯ್ಯಾಸ್ ಅಕಾಡೆಮಿ ಮುಖ್ಯಸ್ಥ ದತ್ತ ಕರುಂಬಯ್ಯ ಅವರ ತಂದೆ ಅವರನ್ನು ಮಾಸ್ಟರ್ ಎಂದು ಕರೆಯುತ್ತಿದ್ದು. ಇವರ ಹೆಸರನ್ನು ಸದಾ ಉಳಿಸಿಕೊಳ್ಳಲು ಅವರ ಹೆಸರಿನಲ್ಲಿಯೇ ಟೂರ್ನಿ ಆಯೋಜಿಸಲಾಗುತ್ತಿದೆ. ಜಿಲ್ಲೆಯಿಂದ ಆಯ್ದ ಆಹ್ವಾನಿತ ತಂಡಗಳು ಪಾಲ್ಗೊಳ್ಳುತ್ತಿವೆ.
ಉದ್ಘಾಟನೆ ಸಂದರ್ಭ ಎಎಸ್‍ಎಫ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ, ಕಾಲ್ಸ್ ಮುಖ್ಯಸ್ಥ ದತ್ತಾ ಕರುಂಬಯ್ಯ ಪಾಲ್ಗೊಳ್ಳಲಿದ್ದಾರೆ. ತಾ. 12 ರಂದು ನಡೆಯುವ ಸಮಾರೋಪದಲ್ಲಿ ಹಾಕಿ ಇಂಡಿಯಾ ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.